ಬೆಳಗಾವಿಯಲ್ಲಿ ಕುಂದಾಪುರ ಮೂಲದ ವ್ಯಕ್ತಿಯ ಕೊಲೆ

Prasthutha|

ಕುಂದಾಪುರ/ಬೆಳಗಾವಿ: ಬೆಳಗಾವಿಯಲ್ಲಿ ಪಾನ್‌ ಬೀಡ ಅಂಗಡಿ ನಡೆಸುತ್ತಿದ್ದ ಕುಂದಾಪುರದ ಗೋಳಿಯಂಗಡಿ ಸಮೀಪದ ಹಿಲಿಯಾಣ ಮೂಲದ ನಿವಾಸಿ ಬಾಲಕೃಷ್ಣ ಶೆಟ್ಟಿ (54) ಅವರನ್ನು ಕೊಲೆಗೈಯ್ಯಲಾಗಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ರೌಡಿಶೀಟರ್ ದತ್ತಾತ್ರೇಯ ಆಲಿಯಾಸ್‌ ದತ್ತ ಶಿವಾನಂದ ಜಾಂತಿಕಟ್ಟಿ ಎನ್ನುವಾತನನ್ನು ಬಂಧಿಸಲಾಗಿದೆ. ಹಂತಕ ದತ್ತ ಬಾಲಕೃಷ್ಣ ಶೆಟ್ಟಿ ಅವರ ಬೀಡಾ ಅಂಗಡಿಗೆ ಬಂದು ಗುಟ್ಕಾ ಕೇಳಿದ್ದಾನೆ. ಆಗ ಬಾಲಕೃಷ್ಣ ಶೆಟ್ಟಿ ಹಣ ಕೇಳಿದಾಗ ಇಬ್ಬರ ಮಧ್ಯೆ ಜಗಳವಾಗಿತ್ತು. ಆಗ ಕುತ್ತಿಗೆಗೆ ಚಾಕು ಇಟ್ಟು ಬೆದರಿಕೆ ಹಾಕಿದ್ದ ಎನ್ನಲಾಗಿದೆ. ಇದರಿಂದ ಭಯಭೀತರಾಗಿ ಶೆಟ್ಟಿ ಪಾನ್‌ ಶಾಪ್‌ ಬಂದ್‌ ಮಾಡಿ ಬೇರೆಯವರ ಮನೆಯಲ್ಲಿ ಉಳಿದುಕೊಂಡಿದ್ದರು. ರಾತ್ರಿ ಮನೆಗೆ ಹೋದಾಗ ದತ್ತ ಏಕಾಏಕಿ ನುಗ್ಗಿ ಬಂದು ಕೊಲೆಗೈದಿದ್ದಾನೆ ಎನ್ನಲಾಗಿದೆ.

- Advertisement -

ಶೆಟ್ಟಿಯವರು 35 ವರ್ಷಗಳಿಂದ ಲಕ್ಷ್ಮೀ ನಗರದಲ್ಲಿ ಪಾನ್‌ ಬೀಡ ಅಂಗಡಿ ನಡೆಸುತ್ತಿದ್ದು, ಪತ್ನಿ, ಪುತ್ರ, ಪುತ್ರಿಯೊಂದಿಗೆ ಅಲ್ಲಿಯೇ ನೆಲೆಸಿದ್ದರು.

- Advertisement -