ಕುಂಬ ಮೇಳದ ವೇಳೆ ನಕಲಿ ಕೋವಿಡ್‌ ಪರೀಕ್ಷೆ ನಡೆಸಿದ್ದ ಪ್ರಯೋಗಾಲಯಗಳ ವಿರುದ್ಧ ಕೇಸ್ ದಾಖಲಿಸಲು ಆದೇಶ

Prasthutha|

ನವದೆಹಲಿ : ಕುಂಬ ಮೇಳದ ವೇಳೆ ನಕಲಿ ಕೋವಿಡ್‌ ಪರೀಕ್ಷೆಗಳನ್ನು ಮಾಡಿದ್ದ ಆರೋಪಗಳ ಬಗ್ಗೆ ಖಾಸಗಿ ಪ್ರಯೋಗಾಲಯಗಳ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳುವಂತೆ ಹರಿದ್ವಾರ ಜಿಲ್ಲಾಡಳಿತಕ್ಕೆ ಉತ್ತರಾಖಂಡ ಸರಕಾರ ಆದೇಶಿಸಿದೆ. ಕಳೆದ ಏಪ್ರಿಲ್‌ ನಲ್ಲಿ ನಡೆದ ಕುಂಬಮೇಳದ ವೇಳೆ ಮುಖ್ಯವಾಗಿ ದೆಹಲಿ ಮತ್ತು ಹರ್ಯಾಣದ ಖಾಸಗಿ ಪ್ರಯೋಗಾಲಯಗಳನ್ನು ಕೋವಿಡ್‌ ಪರೀಕ್ಷೆಗಾಗಿ ಸರಕಾರ ನಿಯೋಜಿಸಿತ್ತು.

- Advertisement -

ಮಹಾಕುಂಬ ಮೇಳದ ವೇಳೆ ಕೋವಿಡ್‌ ಪರೀಕ್ಷೆ ಹಗರಣದಲ್ಲಿ ಭಾಗಿಯಾದವರ ವಿರುದ್ಧ ಎಫ್‌ ಐಆರ್‌ ದಾಖಲಿಸಿಕೊಳ್ಳುವಂತೆ ಹರಿದ್ವಾರ ಜಿಲ್ಲಾಡಳಿತಕ್ಕೆ ಉತ್ತರಾಖಂಡ ಸರಕಾರ ಆದೇಶಿಸಿದೆ. ಕುಂಬ ಮೇಳದ ವೇಳೆ ಹರಿದ್ವಾರದ ಐದು ಕಡೆಗಳಲ್ಲಿ ಪರೀಕ್ಷೆ ನಡೆಸಿದ್ದ ದೆಹಲಿ ಮತ್ತು ಹರ್ಯಾಣದ ಪ್ರಯೋಗಾಲಯಗಳ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲು ಹೇಳಲಾಗಿದೆ ಎಂದು ರಾಜ್ಯ ಸರಕಾರದ ವಕ್ತಾರ ಸುದ್ದಿ ಸಂಸ್ಥೆಯೊಂದಕ್ಕೆ ತಿಳಿಸಿದ್ದಾರೆ.

ಕುಂಬ ಮೇಳದ ವೇಳೆ ಒಂದು ಲಕ್ಷಕ್ಕಿಂತಲೂ ಅಧಿಕ ನಕಲಿ ಪರೀಕ್ಷೆಗಳನ್ನು ನಡೆಸಿರುವ ಬಗ್ಗೆ ವರದಿಗಳಾದ ಬಳಿಕ ಈ ಆದೇಶ ಹೊರಬಿದ್ದಿದೆ. ಉತ್ತರಾಖಂಡ ಹೈಕೋರ್ಟ್‌ ನಿರ್ದೇಶಿಸಿದ್ದ ಹಿನ್ನೆಲೆಯಲ್ಲಿ, ದಿನಕ್ಕೆ ಐವತ್ತು ಸಾವಿರ ಪರೀಕ್ಷೆಗಳನ್ನು ಮಾಡಿ ಮುಗಿಸುವ ಗುರಿಯನ್ನು ತಲುಪಲು ಈ ರೀತಿ ನಕಲಿ ಪರೀಕ್ಷೆಗಳನ್ನು ಪ್ರಯೋಗಾಲಯಗಳು ಮಾಡಿದ್ದವು ಎಂದು ವರದಿಗಳಾಗಿತ್ತು.

Join Whatsapp