SSLC ಪರೀಕ್ಷೆಗೆ ಸಿದ್ದತೆ । ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 111 ಹೆಚ್ಚುವರಿ ಪರೀಕ್ಷಾ ಕೇಂದ್ರ

Prasthutha|

ರಾಜ್ಯದಲ್ಲಿ ಕೊರೊನಾ ಸಾಂಕ್ರಮಿಕದ ನಡುವೆ SSLC ಪರೀಕ್ಷೆಗೆ ಶಿಕ್ಷಣ ಇಲಾಖೆ ಸಿದ್ದತೆ ನಡೆಸುತ್ತಿದ್ದು ಅವಿಭಜಿತ ಜಿಲ್ಲೆಗಳಲ್ಲೂ ತಯಾರಿ ನಡೆಯುತ್ತಿದ್ದು ಈ ವರ್ಷ ಎರಡು ಜಿಲ್ಲೆಯಲ್ಲಿ 111 ಹೆಚ್ಚುವರಿ ಪರೀಕ್ಷಾ ಕೇಂದ್ರಗಳನ್ನು ತೆರೆಯಲು ತೀರ್ಮಾನಿಸಲಾಗಿದೆ.

- Advertisement -

ಹಿಂದಿನ ವರ್ಷ ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 145 ಪರೀಕ್ಷಾ ಕೇಂದ್ರಗಳಿದ್ದರೆ ಈ ವರ್ಷ ಅವುಗಳ ಸಂಖ್ಯೆ 256 ಹೆಚ್ಚಳವಾಗಿದೆ. ಕೊರೊನಾ ಮುನ್ನೆಚ್ಚರಿಕೆಯಾಗಿ ಮತ್ತು ವಿದ್ಯಾರ್ಥಿಗಳ ವಾಸಸ್ಥಳಕ್ಕೆ ಹತ್ತಿರದಲ್ಲೇ ಕೇಂದ್ರಗಳಿರಬೇಕೆಂಬ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಕಳೆದ ವರ್ಷ ದ.ಕ.ದಲ್ಲಿ 94 ಕೇಂದ್ರಗಳಿದ್ದರೆ ಈ ಬಾರಿ 179ಕ್ಕೆ ಏರಿದೆ. ಉಡುಪಿಯಲ್ಲಿ 51 ಇದ್ದ ಕೇಂದ್ರಗಳ ಸಂಖ್ಯೆ 77ಕ್ಕೇರಿದೆ.

ಈ ಬಾರಿ ಒಂದು ಕೋಣೆಯಲ್ಲಿ ಹತ್ತರಿಂದ ಹನ್ನೆರಡು ವಿದ್ಯಾರ್ಥಿಗಳಿಗೆ ಮಾತ್ರ ಅವಕಾಶವಿದೆ. ಹೀಗಾಗಿ ಒಂದು ವಿದ್ಯಾರ್ಥಿಗಳಿದ್ದರೆ ಈ ಬಾರಿ ಗರಿಷ್ಠ 250 ವಿದ್ಯಾರ್ಥಿಗಳು ಮಾತ್ರ ಪರೀಕ್ಷೆ ಬರೆಯಲಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಗಡಿ ಭಾಗದಲ್ಲಿ ಕೇರಳದ ವಿದ್ಯಾರ್ಥಿಗಳು ಪರೀಕ್ಷೆ ಬರೆಯುವ ಹಿನ್ನೆಲೆಯಲ್ಲಿ ಅವರಿಗೆ ವಾಹನ ವ್ಯವಸ್ಥೆ ಕಲ್ಪಿಸುವ ನಿಟ್ಟಿನಲ್ಲಿ ಬಿಇಒ ಮಾಹಿತಿ ಸಂಗ್ರಹಿಸುತ್ತಿದ್ದಾರೆ ಎನ್ನಲಾಗಿದೆ.

Join Whatsapp