ಕುಮಾರಸ್ವಾಮಿ ಆರೋಪ ತೋಳ ಬಂತು ತೋಳ ಕಥೆ: ನಟ ಚೇತನ್

Prasthutha|

ಬೆಂಗಳೂರು : ಸಿಎಂ ಪುತ್ರ ಯತೀಂದ್ರ ವೈರಲ್ ವಿಡಿಯೋ ವಿಚಾರಕ್ಕೆ ಮಾಜಿ ಸಿಎಂ ಕುಮಾರಸ್ವಾಮಿ ಟೀಕಾ ಪ್ರಹಾರ ನಡೆಸುತ್ತಿರುವುದಕ್ಕೆ ನಟ ಚೇತನ್ ವಿರೋಧ ವ್ಯಕ್ತಪಡಿಸಿದ್ದಾರೆ.

- Advertisement -

ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಅವರ ಪುತ್ರ ಯತೀಂದ್ರರನ್ನು ‘ಕಲೆಕ್ಷನ್ ಕಿಂಗ್ಸ್’ ಎಂದು ಹೆಚ್ ಡಿ ಕುಮಾರಸ್ವಾಮಿ ಕರೆದಿದ್ದಾರೆ. ಆದರೆ ಮಗ ಮತ್ತು ತಂದೆಯ ನಡುವಿನ ಫೋನ್ ಕರೆಯ ಸಂಭಾಷಣೆಯಲ್ಲಿ ಯಾವುದೇ ಭ್ರಷ್ಟ ವ್ಯವಹಾರಗಳನ್ನು ಸೂಚಿಸುವುದಿಲ್ಲ. ಪದೇ ಪದೇ ‘ತೋಳ-ಬಂತು-ತೋಳ’ ಎಂಬ ಕಥೆಯಂತೆ ಹೇಳುತ್ತಾ ಹೋದರೆ ಕುಮಾರಸ್ವಾಮಿಯವರು ಜನರಲ್ಲಿ ವಿಶ್ವಾಸಾರ್ಹತೆಯನ್ನು ಕಳೆದುಕೊಳ್ಳುತ್ತಿದ್ದಾರೆ. ಇದರಿಂದಾಗಿ ಯಾವಾಗಲಾದರೂ ಒಂದು ವೇಳೆ ನಿಜವಾದ ತೋಳವು ಕಾಣಿಸಿಕೊಂಡರೆ ಕುಮಾರಸ್ವಾಮಿಯವರ ಮಾತನ್ನು ಗಂಭೀರವಾಗಿ ಯಾರು ಕೂಡ ಪರಿಗಣಿಸುವುದಿಲ್ಲಎಂದು ನಟ ಚೇತನ್ ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿದ್ದಾರೆ.



Join Whatsapp