ಉಡುಪಿ ಹತ್ಯೆ ಪ್ರಕರಣ: ಮಹಜರು ವೇಳೆ ಆರೋಪಿಯ ಮೇಲೆ ದಾಳಿಗೆ ಯತ್ನ..!

Prasthutha|

►ಸ್ಥಳದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣ, ಪೊಲೀಸರಿಂದ ಲಾಠಿಚಾರ್ಜ್

- Advertisement -

ಉಡುಪಿ: ನೇಜಾರುವಿನಲ್ಲಿ ಒಂದೇ ಕುಟುಂಬದ ನಾಲ್ವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಪ್ರವೀಣ್ ಅರುಣ್ ಚೌಗಲೆ(39) ನನ್ನು ಪೊಲೀಸರು ಸ್ಥಳ ಮಹಜರುಗೆ ಕರೆದುಕೊಂಡ ಬಂದ ವೇಳೆ ಗುಂಪೊಂದು ಆರೋಪಿಗೆ ಹಲ್ಲೆ ನಡೆಸಲು ಯತ್ನಿಸಿದ ಘಟನೆ ಬೆಳಕಿಗೆ ಬಂದಿದೆ.


ಈ ವೇಳೆ ಪೊಲೀಸರು ಲಾಠಿ ಚಾರ್ಜ್ ನಡೆಸಿದ್ದಾರೆ. ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.

- Advertisement -


ಬೆಳಗ್ಗೆಯಿಂದಲೇ ಘಟನಾ ಸ್ಥಳದಲ್ಲಿ ಜನ ಜಮಾಯಿಸಿದ್ದು, 11.30 ಗಂಟೆಗೆ ಆರೋಪಿಯನ್ನು ಸ್ಥಳ ಮಹಜರು ಸ್ಥಳಕ್ಕೆ ಬರುವುದಾಗಿ ಹೇಳಲಾಗಿತ್ತು. ಆದರೆ ಸಂಜೆ 4.30 ಕ್ಕೆ ಆರೋಪಿಯನ್ನು ಕರೆತರಲಾಗಿತ್ತು.


ಈ ಹತ್ಯೆ ಪ್ರಕರಣದ ತನಿಖೆ ಸಂಬಂಧಿಸಿದಂತೆ ಆರೋಪಿಯನ್ನು ಸ್ಥಳ ಮಹಜರು ಮಾಡಲು ಕರೆತಂದ ಸಂದರ್ಭ ಸ್ಥಳದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಕೃತ್ಯದಲ್ಲಿ ಭಾಗಿಯಾದ ಆರೋಪಿ ಪ್ರವೀಣ್ ಚೌಗಲೆಯನ್ನು ಪೊಲೀಸರು ಬಿಗಿ ಬಂದೋ ಬಸ್ತ್ ನಲ್ಲಿ ಕಪ್ಪು ವಸ್ತ್ರದಲ್ಲಿ ಮುಖ ಕಾಣದಂತೆ ಹತ್ಯೆಗೈದ ಮನೆಗೆ ಕರೆತಂದಿದ್ದಾರೆ.



Join Whatsapp