ದಿಢೀರನೆ ಸುದ್ದಿಗೋಷ್ಠಿ ಕರೆದ ಕುಮಾರಸ್ವಾಮಿ: ಕುತೂಹಲ ಸೃಷ್ಟಿ

Prasthutha|

- Advertisement -

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಹೆ ಡಿ ಕುಮಾರಸ್ವಾಮಿ ದಿಢೀರನೆ ಸುದ್ದಿ ಗೋಷ್ಠಿ ಕರೆದಿದ್ದು, ಕುತೂಹಲ ಸೃಷ್ಟಿಸಿದೆ.

ದಸರಾ ಮುಗಿದ ನಂತರ ಕುಮಾರಸ್ವಾಮಿ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ನಡುವೆ ವಾಗ್ದಾಳಿ ನಡೆಯುತ್ತಿದ್ದು,ರಾಮನಗರ ಜಿಲ್ಲೆಯನ್ನು ಬೆಂಗಳೂರಿಗೆ ಸೇರಿಸುತ್ತೇನೆ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ. ಹಾಗೆ ಆಗುವುದಕ್ಕೆ ನಾನು ಬಿಡುವುದಿಲ್ಲ ಎಂದು ಕುಮಾರಸ್ವಾಮಿ ಗುಡುಗಿದ್ದರು.

- Advertisement -

ನಿನ್ನೆ ಡಿಕೆ ಶಿವಕುಮಾರ್ ಟ್ವೀಟ್ ಮಾಡಿ ರಾಮನಗರ ಜಿಲ್ಲೆಯನ್ನು ಬೆಂಗಳೂರು ದಕ್ಷಿಣ ಜಿಲ್ಲೆಯಾಗಿ ಮರುನಾಮಕರಣ ಮಾಡಲಾಗುವುದು ಎಂದು ಟ್ವೀಟ್ ಮಾಡಿದ್ದರು.ಯಾರದೋ ಲಾಭಕ್ಕಾಗಿ ರಾಮನಗರ ಜಿಲ್ಲೆ ಮಾಡಲಾಗಿದೆ ಎಂದಲದೂ ಶಿವಕುಮಾರ್ ಹೇಳಿದ್ದರು.

ಈ ಸಂಬಂಧವಾಗಿ ಸುದ್ದಿಗೋಷ್ಠಿಯಲ್ಲಿ ಕುಮಾರಸ್ವಾಮಿ ಉತ್ತರ ನೀಡುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ಈ ಬಗ್ಗೆಯೂ ಕುಮಾರಸ್ವಾಮಿ ಮಾತನಾಡುವ ಸಾಧ್ಯತೆ ಇದೆ.



Join Whatsapp