ಜಗ್ಗೇಶ್ ಪತ್ನಿ ಪೂಜೆ ಮಾಡಿ ಇಟ್ಟಿದ್ದ ಪೆಂಡೆಂಟ್ ಕೊಟ್ಟಿದ್ದಾರೆ: ಅಧಿಕಾರಿಗಳು

Prasthutha|

- Advertisement -

ಬೆಂಗಳೂರು: ಹುಲಿ ಉಗುರು ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ಜಗ್ಗೇಶ್ ಮನೆಗೆ (ಬುಧವಾರ) ಅಧಿಕಾರಿಗಳು ತೆರಳಿ ಪರಿಶೀಲನೆ ನಡೆಸಿದರು.
ಈ ವೇಳೆ ಜಗ್ಗೇಶ್ ಪತ್ನಿ ಪರಿಮಳಾ ಅವರು, ಪೂಜೆ ಮಾಡಿದ್ದ ಇಟ್ಟಿದ್ದ ಪೆಂಡೆಂಟ್ ಅನ್ನು ಅಧಿಕಾರಿಗಳಿಗೆ ನೀಡಿದ್ದಾರೆ.

ಈ ಕುರಿತು ಮಾತನಾಡಿರುವ ಅರಣ್ಯ ಸಂರಕ್ಷಣಾಧಿಕಾರಿ ರವೀಂದ್ರ, ನೋಟಿಸ್ ಕೊಟ್ಟಿದ್ದೇವೆ. ಅದಕ್ಕೆ ಪೆಂಡೆಂಟ್ ಕೊಟ್ಟಿದ್ದಾರೆ. ನಾವು ಯಾವುದೇ ತಪಾಸಣೆ ನಡೆಸಲಿಲ್ಲ. ಜಗ್ಗೇಶ್ ಮಡದಿ ಪೆಂಡೆಂಟ್, ಲಾಕೆಟ್ ಕೊಟ್ಟಿದ್ದಾರೆ. ಜಗ್ಗೇಶ್ ಹೋಗುವಾಗ ಕೊಟ್ಟು ಹೋಗಿದ್ದಾರೆ. ಅವರು ಮನೆಯಲ್ಲಿ ಇರಲಿಲ್ಲ ಎಂದು ಮಾಹಿತಿ ನೀಡಿದ್ದಾರೆ.