ನೂತನ ಬಸ್‌ಗಳಿಗೆ ಹೆಸರು, ಬ್ರ್ಯಾಂಡ್‌ ಸೂಚಿಸಲು ಸಾರ್ವಜನಿಕರಿಗೆ KSRTC ಯಿಂದ ಆಫರ್!

Prasthutha|

ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು ನೂತನವಾಗಿ ಆರಂಭಿಸಲಿರುವ ಮಲ್ಟಿ ಆ್ಯಕ್ಸೆಲ್ ಸ್ಲೀಪರ್ ಹಾಗೂ ವಿದ್ಯುತ್ ಚಾಲಿತ ವಾಹನ ಗಳಿಗೆ ಸಾರ್ವಜನಿಕರು ಹಾಗೂ ಪ್ರಯಾಣಿಕರಿಂದ ಬ್ರಾಂಡ್ ಹೆಸರು ಟ್ಯಾಗ್‌ಲೈನ್ ಹಾಗೂ ಗ್ರಾಫಿಕ್ಸ್‌ ಆಹ್ವಾನಿಸಿದೆ.

- Advertisement -

ಪ್ರತಿ ಮಾದರಿಯ ವಾಹನಗಳಿಗೆ ಉತ್ತಮ ಬ್ರಾಂಡ್ ಹೆಸರನ್ನು ಸೂಚಿಸುವ ವಿಜೇತರಿಗೆ ₹10,000 ನಗದು ಬಹುಮಾನವನ್ನು ಹಾಗೂ ಉತ್ತಮ ಗ್ರಾಫಿಕ್ಸ್ ನೀಡಿದವರಿಗೆ ತಲಾ ₹ 25,000 ಬಹುಮಾನವನ್ನು ನೀಡಲಾಗುವುದು. ಹೆಸರನ್ನು ಸೂಚಿಸಲು ಕಡೆಯ ದಿನಾಂಕ ಡಿಸೆಂಬರ್ 5 ಎಂದು ಪ್ರಕಟಣೆ ತಿಳಿಸಿದೆ.

ನಿಮ್ಮ ಬ್ರ್ಯಾಂಡ್ ಐಡಿಯಾಗಳನ್ನು cpro @ksrtc.org ಇ–ಮೇಲ್ ಗೆ ಅಥವಾ ನಿಗಮದ ಫೇಸ್‌ಬುಕ್/ಟ್ವಿಟರ್ ಖಾತೆಗೆ ಸಲ್ಲಿಸಬಹುದು.

Join Whatsapp