ಕತಾರ್ | ಮಸೀದಿ ಸಂದರ್ಶಿಸಿದ ವಿದೇಶಿ ಫುಟ್ಬಾಲ್ ಅಭಿಮಾನಿಗಳು

Prasthutha|

ದೋಹಾ: ಕೊಲ್ಲಿ ರಾಷ್ಟ್ರ ಕತಾರ್’ನಲ್ಲಿ ಫಿಫಾ ಫುಟ್ಬಾಲ್ ಪಂದ್ಯಾಟ ನಡೆಯುತ್ತಿದ್ದು, ಪಂದ್ಯಾಟ ವೀಕ್ಷಣೆಗೆ ಬಂದ ವಿದೇಶಿ ಅಭಿಮಾನಿಗಳು ಮುಸ್ಲಿಮರ ಆಝಾನ್ ಧ್ವನಿ ಕೇಳಿದ ಬಳಿಕ ಇಸ್ಲಾಮ್ ಮತ್ತು ಅದರ ಸಂದೇಶ ಕಲಿಯಲು ಮಸೀದಿಗಳಿಗೆ ತೆರಳುತ್ತಿರುವುದು ಬೆಳಕಿಗೆ ಬಂದಿದೆ.

ಈ ಕುರಿತ ವೀಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಫಿಫಾ ಫುಟ್ಬಾಲ್ ವೀಕ್ಷಿಸಲು ಬಂದ ವಿದೇಶಿ ಪ್ರಜೆಗಳು ಮುಸ್ಲಿಮರ ಆಝಾನ್’ಗೆ ಆಕರ್ಷಿತರಾಗಿ ಮಸೀದಿಯೆಡೆಗೆ ತೆರಳುತ್ತಿರುವುದು ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ ಹೆಚ್ಚಿನ ಸಂಖ್ಯೆಯ ವಿದೇಶಿ ಪ್ರಜೆಗಳು ಮಸೀದಿ ಸಂದರ್ಶನ ನಡೆಸಿ, ಇಸ್ಲಾಮ್ ಮತ್ತು ಅದರ ಬೋಧನೆಗಳನ್ನು ಕಲಿಯುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

- Advertisement -