ಮಂಗಳೂರು: ಗುತ್ತಿಗೆ ಆಧಾರದಲ್ಲಿ KSRTC ಬಸ್ ಚಾಲಕರ ನೇರ ನೇಮಕಾತಿಗೆ ಅರ್ಜಿ ಆಹ್ವಾನ

Prasthutha|

- Advertisement -

ಮಂಗಳೂರು: ಕೆಎಸ್ ಆರ್ ಟಿಸಿ ಬಸ್ ಗಳಲ್ಲಿ ಗುತ್ತಿಗೆ ಆಧಾರದಲ್ಲಿ ಚಾಲಕರನ್ನು ನೇಮಕಗೊಳಿಸುವ ಪ್ರಕ್ರಿಯೆಗೆ ಅರ್ಜಿ ಆಹ್ವಾನಿಸಲಾಗಿದೆ.

ದ.ಕ. ಹಾಗೂ ಉಡುಪಿ ಜಿಲ್ಲೆಯ ಅಭ್ಯರ್ಥಿಗಳಿಗೆ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.

- Advertisement -

ಆಸಕ್ತ ಅಭ್ಯರ್ಥಿಗಳು ಆಗಸ್ಟ್ 22ರ ಮಂಗಳವಾರದಂದು ಮಂಗಳೂರಿನ ಮಲ್ಲಿಕಟ್ಟೆಯಲ್ಲಿರುವ ಇಂದಿರಾಗಾಂಧಿ ಜನ್ಮಶತಾಬ್ದಿ ಭವನದ ಕೆಳ ಅಂತಸ್ಥಿನಲ್ಲಿ ಸಂದರ್ಶನಕ್ಕೆ ಹಾಜರಾಗುವಂತೆ ಸೂಚಿಸಲಾಗಿದೆ. ಬೆಳಗ್ಗೆ 10 ಗಂಟೆಯಿಂದ 1ಗಂಟೆಯ ತನಕ ಅವಕಾಶ ಕಲ್ಪಿಸಲಾಗಿದೆ.

ಸಲ್ಲಿಸಬೇಕಾದ ದಾಖಲೆಗಳು:

ಆಧಾರ್ ಕಾರ್ಡ್
ವಾಹನ ಚಾಲನಾ ಪರವಾಣಿಗೆ ಪತ್ರ
ಭಾರೀ ಗಾತ್ರದ ವಾಹನ ಚಾಲನೆ ಅನುಜ್ಞಾ ಪತ್ರ
4 ಪಾಸ್ ಪೋರ್ಟ್ ಫೋಟೊ
7ನೇ ತರಗತಿ ಮೇಲ್ಪಟ್ಟ ತೇರ್ಗಡೆಯಾದ ಅಂಕಪಟ್ಟಿ

Join Whatsapp