ಸಾರಿಗೆ ಇಲಾಖೆ ನಿಮ್ಮ ಕುಟುಂಬದ ಆಸ್ತಿಯಲ್ಲ, ರಾಜ್ಯದ ಜನರ ಆಸ್ತಿ: ಸವದಿ ವಿರುದ್ಧ ಕೋಡಿಹಳ್ಳಿ ಚಂದ್ರಶೇಖರ್‌ ಆಕ್ರೋಶ

Prasthutha|

ಬೆಂಗಳೂರು: ಸಾರಿಗೆ ಇಲಾಖೆ ನಿಮ್ಮ ಅಪ್ಪನ ಆಸ್ತಿ ಅಲ್ಲ. ಕರ್ನಾಟಕದ ಜನರ ಆಸ್ತಿ. ತಲೆ ತಿರುಗೋ ಹಾಗೇ ಮಾತಾಡೋದನ್ನ ಬಿಡಿ ಎಂದು ಸಾರಿಗೆ ಸಚಿವ ಲಕ್ಷ್ಮಣ್‌ ಸವದಿಯವರ ಮೇಲೆ ಸಾರಿಗೆ ನೌಕರರ ಕೂಟದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ವಾಗ್ದಾಳಿ ನಡೆಸಿದ್ದಾರೆ.

- Advertisement -

ನಗರದ ಮೌರ್ಯ ಸರ್ಕಲ್​ನಲ್ಲಿ ಸಾರಿಗೆ ನೌಕರರ ಪ್ರತಿಭಟನೆ ಕುರಿತು ಮಾತನಾಡಿದ ಕೋಡಿಹಳ್ಳಿ ಚಂದ್ರಶೇಖರ್, ‘ನಮ್ಮ ಬೇಡಿಕೆ ಒಂದೇ ಇರುತ್ತೆ. ಅದು ಸಾರಿಗೆ ನೌಕರರನ್ನ ಸರ್ಕಾರಿ ನೌಕರರನ್ನಾಗಿ ಮಾಡಬೇಕು ಎನ್ನುವುದು. ನಮ್ಮ ಬೇಡಿಕೆ ಮಾರ್ಚ್ 15 ರ ಒಳಗೆ ಈಡೇರಿಸಬೇಕು. ಇಲ್ಲವಾದ್ರೆ, ಮಾರ್ಚ್ 15 ರ ಬಳಿಕ ಬಸ್ ಬಂದ್ ಮಾಡಿ ಮುಷ್ಕರ ನಡೆಸಲಾಗುವುದು. ಈ ಹಿಂದೆ ಯಾವುದೇ ಸಿದ್ಧತೆ ಇಲ್ಲದೆ ಒಂದೇ ರಾತ್ರಿಯಲ್ಲಿ ಇಡೀ ಬಸ್ ಸಂಚಾರ ನಿಲ್ಲಿಸಿದ್ದೆವು. ಈಗ ಎಲ್ಲಾ ಸಿದ್ಧತೆ ಮಾಡಿಕೊಂಡಿದ್ದೇವೆ ಎಂದು ಚಂದ್ರಶೇಖರ್ ಹೇಳಿದ್ದಾರೆ.

‘ ನೌಕರರು 40 ವರ್ಷಗಳಿಂದ ನಿರಂತವಾಗಿ ಕೆಲಸ ಮಾಡಿದ್ದಾರೆ. ನೌಕರರ ವಿರುದ್ಧ ಸರ್ಕಾರ ಹಗಲು ದರೋಡೆ ಮಾಡುತ್ತಿದೆ. ನಮ್ಮ ಯುದ್ಧ ಅಹಿಂಸಾತ್ಮಕವಾಗಿ ಇರುತ್ತೆ. ಸಾರಿಗೆ ಇಲಾಖೆ ನಿಮ್ಮ ಅಪ್ಪನ ಆಸ್ತಿ ಅಲ್ಲ. ಕರ್ನಾಟಕದ ಜನರ ಆಸ್ತಿ. ತಲೆ ತಿರುಗೋ ಹಾಗೇ ಮಾತನಾಡುವುದನ್ನು ಬಿಡಿ. ಮಿಸ್ಟರ್ ಲಕ್ಷಣ್ ಸವದಿ ಅವರೇ ಪದೇ ಪದೇ ಮಾತಾಡ್ತೀರಾ, ಯಾರು ಅವ್ರು ಅಂತ ಪ್ರಶ್ನೆ ಮಾಡ್ತೀರಲ್ಲ. ಆವತ್ತು ಪ್ರತಿಭಟನೆ ವೇಳೆ ನೀವು ಮತ್ತು ಸರ್ಕಾರದ ನಿಗಮದ ಅಧ್ಯಕ್ಷರು ಬಂದು ನಮಗೆ ಲವ್ ಲೆಟರ್ ಕೊಟ್ಟಿದ್ದಾ? (ಪತ್ರದ ಮೂಲಕ ಆಶ್ವಾಸನೆ ಕೊಟ್ಟಿದ್ದು). ಅವಾಗ ನಿಮ್ಮ ಜ್ಞಾನ ಎಲ್ಲಿತ್ತು..? ಅವಾಗ ಸರಿ ಇತ್ತಾ? ಎಂದು ಹರಿಹಾಯ್ದಿದ್ದಾರೆ.

Join Whatsapp