►ಹಿಂದೂಗಳ ವ್ಯಾಪಾರ ಬಹಿಷ್ಕರಿಸುವಂತೆ ನಾವು ಹೇಳಲ್ಲ
ಮಂಗಳೂರು: ರಾಜ್ಯದಲ್ಲಿ ಸಂಘಪರಿವಾರ ಸೃಷ್ಟಿಸಿರುವ ಹಲಾಲ್ – ಜಟ್ಕಾ ವಿವಾದದ ಕುರಿತು ಪ್ರತಿಕ್ರಿಯಿಸಿರುವ ಮುಸ್ಲಿಂ ಸೆಂಟ್ರಲ್ ಕಮೀಟಿ ಅಧ್ಯಕ್ಷ ಹಾಜಿ ಕೆ ಎಸ್ ಮಹಮ್ಮದ್ ಮಸೂದ್, ಹಲಾಲ್ ಎಂದರೆ ಧರ್ಮ ಸಮ್ಮತ್ತವಾದ ಕೆಲವು ಪ್ರಾಣಿ ಪಕ್ಷಿಗಳ ವಧೆಯಾಗಿದೆ ಎಂದರು. ನಾವು ಹಲಾಲ್ ಮಾಡದೆ ಆಹಾರ ಸೇವನೆ ಮಾಡುವುದಿಲ್ಲ, ತಿನ್ನುವವರು ತಿನ್ನುತ್ತಾರೆ ತಿನ್ನದವರು ಇರ್ತಾರೆ ನಾವು ಹಾಲಾಲ್ ಕಟ್ ತಿನ್ನುತ್ತೇವೆ ಎಂದು ಮಾರ್ಮಿಕವಾಗಿ ನುಡಿದರು.
ಹಲಾಲ್ ಎಂದರೆ ಧರ್ಮ ಸಮ್ಮತ್ತವಾದ ಕೆಲವು ಪ್ರಾಣಿ ಪಕ್ಷಿಗಳ ವಧೆಯಾಗಿದೆ, ಆದ್ರೆ ಜಟ್ಕಾ ಕಟ್ ಎಂದ್ರೆ ಯಾವುದನ್ನು ಕಡಿಯಬಹುದು. ಹಲಾಲ್ ವಿಧಾನ ಧರ್ಮಸಮ್ಮತ್ತವಾದ ವಿಧಿಗಳ ಪ್ರಕಾರ ಮತ್ತು ವಿಜ್ಞಾನ ಕೂಡಾ ಆಗಿದೆ ಎಂದರು. ಹಿಂದೂಯೇತರೊಂದಿಗೆ ವ್ಯಾಪಾರ ನಿಷೇಧ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು ಈ ಬಗ್ಗೆ ಬೊಮ್ಮಯಿ ಸರ್ಕಾರ ಸಮಾಂತರ ಮತ್ತು ಸಮಾಧಾನದ ನಿರ್ಧಾರ ಕೈಗೊಳ್ಳಬೇಕಿದೆ ಎಂದು ವಿನಂತಿಸಿದರು.
ರಂಜಾನ್ ಆರಂಭದ ಬಗ್ಗೆ ಸರ್ಕಾರಕ್ಕೆ ಮತ್ತು ಉಭಯ ಜಿಲ್ಲೆಯ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಲಾಗಿದ್ದು, ರಂಜಾನ್ ವೇಳೆ ರಾತ್ರಿ ನಮಾಜ್ ಪ್ರಾರ್ಥನೆ ನೆರವೇರಲಿದೆ, ಈ ಸಂದರ್ಭ ಪ್ರಾರ್ಥನೆಗೆ ಬರುವ ಮುಸ್ಲಿಮರಿಗೆ ಸಂಪೂರ್ಣ ಭದ್ರತೆ ನೀಡುವಂತೆ ಮನವಿ ಮಾಡಲಾಗಿದೆ ಎಂದರು.
ಹಿಂದೂಯೇತರಿಗೆ ವ್ಯಾಪಾರ ಮಾಡಬೇಡಿ ಅಭಿಯಾನ ವಿಚಾರವಾಗಿ ಮಾತನಾಡಿದ ಮಸೂದ್, ಹಿಂದೂಗಳು ನಮ್ಮವರ ವ್ಯಾಪಾರ ಬಹಿಷ್ಕರಿಸಿದರೆ ತೊಂದರೆ ಇಲ್ಲ, ನಮ್ಮವರಿಗೆ ನಾವು ಆ ರೀತಿ ಹೇಳುವುದಿಲ್ಲ ಎಂದರು.