ಬೆಲೆಯೇರಿಕೆ ವಿರುದ್ಧ ಸಿಪಿಐಎಂ ಪ್ರತಿಭಟನೆ

Prasthutha|

ಮಂಗಳೂರು: ಪ್ರತಿ ನಿತ್ಯ ಅಡಿಗೆ ಅನಿಲ, ಪೆಟ್ರೋಲಿಯಂ, ಸೇರಿದಂತೆ ಇನ್ನಿತರ ವಸ್ತುಗಳ ಬೆಲೆಯೇರಿಕೆ ಖಂಡಿಸಿ ಸಿಪಿಐಎಂ ಮಂಗಳೂರಿನ ಕ್ಲಾಕ್ ಟವರ್ ಮುಂಭಾಗ ಪ್ರತಿಭಟನೆ ನಡೆಸಿತು. ಪ್ರತಿಭಟನೆಯನ್ನುದ್ದೇಶಿಸಿ. ಸಿಪಿಐಎಂ ಮುಖಂಡ ಸುನೀಲ್ ಕುಮಾರ್ ಬಜಾಲ್ ಮತ್ತಿತರರು ಮಾತನಾಡಿದರು.

- Advertisement -

ಜನರ ಬದುಕಿಗೆ ಕೊಳ್ಳಿ ಇಡುವಂತೆ ಮೋದಿ ಸರಕಾರ ಬೆಲೆ ಏರಿಸಿದೆ. ನಾರ್ವೆಡ್ ಆದಾಯದ 0.9% ಪೆಟ್ರೋಲಿಗೆ ವೆಚ್ಚವಾದರೆ ಭಾರತದ ತಲಾ 13% ಪೆಟ್ರೋಲಿಯಂಗೆ ವೆಚ್ಚವಾಗುತ್ತಿದೆ ಎಂದು ಸಿಪಿಐಎಂ ಜಿಲ್ಲಾ ಮುಖ್ಯಸ್ಥ ಯಾದವ ಶೆಟ್ಟಿ ಹೇಳಿದರು. ಕಾಂಗ್ರೆಸ್ ಸರಕಾರದ ಬಗ್ಗೆ ಮೋದಿ ಸರಕಾರವು ಜನರಲ್ಲಿ ಸುಳ್ಳು ಹೇಳುತ್ತಾ ಕೋಟಿಗಟ್ಟಲೆ‌ ಹಣ ಪಡೆದಿದೆ. ಆದರೆ ಅದನ್ನು ಜನರ ಕಲ್ಯಾಣಕ್ಕೆ ಉಪಯೋಗಿಸದೆ ಕಾರ್ಪೊರೇಟ್ ಪರ ಬಳಸುತ್ತಿದೆ ಎಂದು ಯಾದವ ಶೆಟ್ಟಿ ಆರೋಪಿಸಿದರು.

ಪ್ರತಿಭಟನೆಯಲ್ಲಿ ಇಮ್ತಿಯಾಝ್, ಬಾಲಕೃಷ್ಣ ಶೆಟ್ಟಿ, ವಾಸುದೇವ ಉಚ್ಚಿಲ್, ಜಯಂತಿ ಶೆಟ್ಟಿ, ಪದ್ಮಾವತಿ ಶೆಟ್ಟಿ ಭಾರತಿ ಬೋಳಾರ್ ಮೊದಲಾದವರು ಉಪಸ್ಥಿತರಿದ್ದರು.

Join Whatsapp