ಮಂಡ್ಯ : ಕೆಆರ್ ಎಸ್ ಅಣೆಕಟ್ಟಿನ ಮೇಲೆ ಯುವಕನೊಬ್ಬ ಸರ್ಕಾರಿ ಪೊಲೀಸ್ ಜೀಪಿನಲ್ಲಿ ಮೋಜಿನ ಸವಾರಿ ಮಾಡಿದ್ದಾನೆ. ಯುವಕ ಸರ್ಕಾರಿ ಜೀಪ್ ಜಲಾಯಿಸುತ್ತಿದ್ದರೆ ಪೊಲೀಸ್ ಅಧಿಕಾರಿ ಪಕ್ಕದಲ್ಲಿ ಕೂತು ಮೊಬೈಲಿನಲ್ಲಿ ದೃಶ್ಯ ಸೆರೆ ಹಿಡಿಯುತ್ತಿದ್ದನು. ಈ ದೃಶ್ಯಾವಳಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಜೀಪ್ ನೀಡಿದ್ದ ಪೊಲೀಸ್ ಅಧಿಕಾರಿಯನ್ನು ಈಗ ಅಮಾನತು ಮಾಡಲಾಗಿದೆ.
ಕೆಆರ್‌ಎಸ್ ಅಣೆಕಟ್ಟಿನ ಮೇಲೆ ಪೊಲೀಸ್ ಜೀಪ್ ಚಲಾಯಿಸುವುದಕ್ಕೆ ಅನುವು ಮಾಡಿ ಕೊಟ್ಟಿದ್ದು, ಜೀಪ್‌ನ ದುರ್ಬಳಕೆ ಆರೋಪದಡಿಯಲ್ಲಿ ಕರ್ನಾಟಕ ಕೈಗಾರಿಕಾ ಭದ್ರತೆಯ 3ನೇ ಪಡೆಯ ಪೊಲೀಸ್ ಇನ್ಸ್‌ಪೆಕ್ಟರ್ ಎಸ್.ಬಿ ಸ್ವಾಮಿ ಅಮಾನತಾದ ಪೊಲೀಸ್ ಅಧಿಕಾರಿಯಾಗಿದ್ದಾರೆ.
ಈ ಹಿಂದೆ ಕೆಆರ್ ಎಸ್ ಹಿನ್ನೀರಿನಲ್ಲಿ ಪೊಲೀಸರು ಕುಟುಂಬರ ಸಮೇತ ಪಾರ್ಟಿ ಮತ್ತು ಬರ್ಜರಿ ಭೋಜನಕೂಟ ಏರ್ಪಡಿಸಿ ಸಾರ್ವಜನಿಕರ ಆಕ್ರೋಶಕ್ಕೆ ಗುರಿಯಾಗಿದ್ದದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.