ಕಲ್ಲಿಕೋಟೆ ಅವಳಿ ಸ್ಫೋಟ| ಪ್ರಮುಖ ಆರೋಪಿ ತಡಿಯಂಡವಿಡ ನಝೀರ್ ಖುಲಾಸೆ

Prasthutha|

ತಿರುವನಂತಪುರಂ: ಕಲ್ಲಿಕೋಟೆ ಅವಳಿ ಸ್ಫೋಟ ಪ್ರಕರಣದ ಪ್ರಮುಖ ಆರೋಪಿ ತಡಿಯಂಡವಿಡ ನಝೀರ್ ನನ್ನು ಕೇರಳ ಹೈ ಕೋರ್ಟ್ ಖುಲಾಸೆಗೊಳಿಸಿದೆ.

- Advertisement -

ನಝೀರ್ ಜೊತೆಗೆ ಪ್ರಕರಣದ ನಾಲ್ಕನೇ ಆರೋಪಿ ಶಫಾಝ್ ಕೂಡ ಖುಲಾಸೆಗೊಂಡಿರುವುದಾಗಿ ವರದಿಯಾಗಿದೆ.

ರಾಷ್ಟ್ರೀಯ ತನಿಖಾ ಸಂಸ್ಥೆ(NIA)ಯ ಮನವಿಯನ್ನು ವಜಾಗೊಳಿಸಿದ ನ್ಯಾಯಮೂರ್ತಿ ಕೆ. ವಿನೋದ್ ಚಂದ್ರನ್ ನೇತೃತ್ವದ ಪೀಠ ಈ ತೀರ್ಪು ನೀಡಿದೆ. ಹೈಕೋರ್ಟ್ ತೀರ್ಪಿನ ವಿರುದ್ಧ ಎನ್‌ಐಎ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲು ನಿರ್ಧರಿಸಿದೆ.

- Advertisement -

ವಿಚಾರಣಾ ನ್ಯಾಯಾಲಯ ತಡಿಯಂಡವಿಡ ನಝೀರ್ ಗೆ ತ್ರಿವಳಿ ಜೀವಾವಧಿ ಹಾಗೂ ಶಫಾಝ್ ಗೆ ಎರಡು ಜೀವಾವಧಿ ಶಿಕ್ಷೆ ವಿಧಿಸಿತ್ತು.

ಪ್ರಕರಣದ ವಿಚಾರಣೆ ಪೂರ್ಣಗೊಂಡ ನಂತರ ನ್ಯಾಯಾಲಯವು ಈ ಹಿಂದೆ ಇಬ್ಬರು ಆರೋಪಿಗಳಾದ ಅಬ್ದುಲ್ ಹಾಲಿಮ್ ಮತ್ತು ಅಬೂಬಕ್ಕರ್ ಯೂಸುಫ್ ನನ್ನು ಖುಲಾಸೆಗೊಳಿಸಿತ್ತು.

ಕಲ್ಲೀಕೋಟೆ ಅವಳಿ ಸ್ಫೋಟವು 2006ರ ಮಾರ್ಚ್ 3ರಂದು ನಡೆದಿತ್ತು. ಈ ಸ್ಫೋಟಗಳಲ್ಲಿ ಮೂವರು ಗಾಯಗೊಂಡಿದ್ದರು.



Join Whatsapp