ಬೆಂಗಳೂರು: ಇಲ್ಲಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ಬೀಮ ಕೋರೆಗಾಂವ್ ವಿಜಯೋತ್ಸವ ಹಾಗೂ ದ್ವಜ ವಂದನಾ ಕಾರ್ಯಕ್ರಮವು ಸಂವಿಧಾನ ಸಂರಕ್ಷಣಾ ಮಹಾ ಒಕ್ಕೂಟದ ವತಿಯಿಂದ ನಡೆಯಿತು.
ಬೆಂಗಳೂರಿನ ರೈಲ್ವೆ ನಿಲ್ದಾಣದಿಂದ ಸ್ವಾತಂತ್ರ್ಯ ಉದ್ಯಾನವನದವರೆಗೆ ಯೋಧರು ಪರೇಡ್ ನಡೆಸಿ ಎಲ್ಲರ ಗಮನ ಸಳೆದರು.
ದ್ವಜ ವಂದನೆ ಸ್ವೀಕರಿಸಿ ಮಾತನಾಡಿದ ಪ್ರಜಾ ಪರಿವರ್ತನಾ ವೇದಿಕೆಯ ಅಧ್ಯಕ್ಷ ಬಿ.ಗೋಪಾಲ್ , 1818 ಜನವರಿ ಒಂದರಂದು ಬಾಲಾಜಿ ಪೇಶ್ವೆ ಬಾಜಿರಾಯನು ಅಸ್ಪೃಶ್ಯ ಮಹರ್ ರ ವಿರುದ್ಧ ಯುದ್ದ ಸಾರಿದ ಸಂದರ್ಭದಲ್ಲಿ 28000ಸಾವಿರ ಪೇಶ್ವೆ ಸೈನಿಕರನ್ನು ಕೇವಲ 500 ಮಂದಿ ಅಸ್ಪೃಶ್ಯ ಸೈನಿಕರು 12ತಾಸುಗಳ ಕಾಲ ಹೋರಾಟ ನಡೆಸಿ ಹೊಡೆದುರುಳಿಸಿದರು ಇಂತಹ ಐತಿಹ್ಯ ನೆನಪಿಗಾಗಿ ಬೀಮ ಕೋರೆಗಾಂವ್ ವಿಜಯೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.
ಇದೊಂದು ಮಹರ್ ರ ಸ್ವಾಭಿಮಾನ ಗೆಲುವಾಗಿದ್ದು. ಭಾರತದಲ್ಲಿ ಪ್ರಜಾ ಪ್ರಭುತ್ವ ಸ್ಥಾಪನೆಯಾಗಿ ಸಾಮಾಜಿಕ, ರಾಜಕೀಯ, ಆರ್ಥಿಕ ಸವಲತ್ತುಗಳು ಸಿಗಲು ನಾಂದಿಯಾಗಿದೆ ಎಂದು ಹೇಳಿದರು.
ವಿಜಯೋತ್ಸವ ಕಾರ್ಯಕ್ರಮದಲ್ಲಿ ದಲಿತ ಸಂಘರ್ಷ ಸಮಿತಿಯ ಹೆಣ್ಣೂರು ಶ್ರೀನಿವಾಸ್, ಪ್ರೋ ರಾಜೇಂದ್ರ ಮತ್ತಿತರರು ಭಾಗವಹಿಸಿದ್ದರು.