ಧಾರ್ಮಿಕ ಮುಖಂಡ ಸೂರಲ್ಪಾಡಿ ನೌಶಾದ್ ಹಾಜಿ‌ ನಿಧನ : SDPI ಸಂತಾಪ

Prasthutha|

ಬೆಳ್ತಂಗಡಿ: ಧಾರ್ಮಿಕ ಮುಖಂಡ ಸೂರಲ್ಪಾಡಿ ನೌಶಾದ್ ಹಾಜಿ ನಿಧನಕ್ಕೆ ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ(SDPI) ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರ ಅಧ್ಯಕ್ಷರಾದ ನವಾಝ್ ಕಟ್ಟೆ ಸಂತಾಪ ವ್ಯಕ್ತಪಡಿಸಿದ್ದಾರೆ.

- Advertisement -

ಈ ಕುರಿತು ಪ್ರತಿಕ್ರಿಯಿಸಿದ ಅವರು, ಸಾಮಾಜಿಕ, ಧಾರ್ಮಿಕ ಮುಖಂಡ, ಕೊಡುಗೈ ದಾನಿ, ಶಿಕ್ಷಣ ಪ್ರೇಮಿ ಸೂರಲ್ಪಾಡಿ  ನೌಶಾದ್ ಹಾಜಿ ಅಪಘಾತದಿಂದ ನಿಧನ  ಹೊಂದಿರುತ್ತಾರೆ. ಇವರ ನಿಧನಕ್ಕೆ SDPI ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರ ಸಮಿತಿಯ ವತಿಯಿಂದ ಸಂತಾಪ ವ್ಯಕ್ತಪಡಿಸುತ್ತಿದ್ದೇನೆ.

ಮೃತರ ಪಾರತ್ರಿಕ ಜೀವನವನ್ನು ದೇವರು ಯಶಸ್ಸು ಗೊಳಿಸಲಿ, ಕುಟುಂಬಕ್ಕೆ ಮತ್ತು ಬಂಧು ಬಳಗಕ್ಕೆ ಇವರ ಅಗಲುವಿಕೆಯ ನೋವನ್ನು ಸಹಿಸುವ ಶಕ್ತಿಯನ್ನು ನೀಡಲಿ ಎಂದು ಪ್ರಾರ್ಥಿಸಿದ್ದಾರೆ.

- Advertisement -

 ಗುರುವಾಯನಕೆರೆ ವೇಣೂರು ರಸ್ತೆಯ ಗರ್ಡಾಡಿ ಸಮೀಪ ಕಾರು ಹಾಗೂ ಬಸ್ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ನೌಶಾದ್ ಹಾಜಿ ಸಹಿತ ಇಬ್ಬರು ಮೃತಪಟ್ಟಿದ್ದರು.

Join Whatsapp