ಕೊಲ್ಕತ್ತಾ ಮುನ್ಸಿಪಲ್ ಚುನಾವಣೆ: ಠೇವಣಿ ಕಳೆದುಕೊಂಡ ಬಿಜೆಪಿ

Prasthutha|

ಪಶ್ಚಿಮ ಬಂಗಾಳ : ಕೊಲ್ಕತ್ತಾ ಮುನ್ಸಿಪಲ್‌ ಕಾರ್ಪೊರೇಷನ್‌ ಚುನಾವಣೆಯಲ್ಲಿ ಆಡಳಿತರೂಢ ಟಿಎಂಸಿ ಭರ್ಜರಿ ಗೆಲುವು ಸಾಧಿಸಿದ್ದು ಇತ್ತೀಚೆಗೆ ಹೊರಬಿದ್ದಿತ್ತು. 144 ವಾರ್ಡ್‌ಗಳ ಪೈಕಿ ಟಿಎಂಸಿ ಬರೋಬ್ಬರಿ 134 ಸ್ಥಾನಗಳನ್ನು ಗೆದ್ದುಕೊಂಡಿತ್ತು. ಆದರೆ ಈ ಚುನಾವಣೆ ಅತ್ಯದಿಕ ಠೇವಣಿ ಮೊತ್ತವನ್ನು ಕಳೆದುಕೊಂಡಿದ್ದು, ಬಿಜೆಪಿ ಮತ್ತು ಪಕ್ಷೇತರ ಅಭ್ಯರ್ಥಿಗಳಾಗಿದ್ದಾರೆ.

- Advertisement -

ಠೇವಣಿ ಕಳೆದುಕೊಂಡಿರುವ ಅತೀದೊಡ್ಡ ಪಕ್ಷವಾಗಿ ಬಿಜೆಪಿ ಹೊರಹೊಮ್ಮಿದರೆ, ಕಾಂಗ್ರೆಸ್‌ ನಂತರದ ಸ್ಥಾನದಲ್ಲಿದೆ. ಎರಡು ರಾಷ್ಟ್ರೀಯ ಪಕ್ಷಗಳಿಗೆ ಹೋಲಿಸಿದರೆ, ಎಡರಂಗದ ಸಾಧನೆ ಉತ್ತಮಮಾಗಿದೆ.144 ವಾರ್ಡ್‌ಗಳ ಕೊಲ್ಕತ್ತಾ ಮುನ್ಸಿಪಲ್‌‌ನಲ್ಲಿ ಬಿಜೆಪಿಯು 142 ವಾರ್ಡ್‌ಗಳಲ್ಲಿ ತನ್ನ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿತ್ತು. ಇವುಗಳಲ್ಲಿ 116 ಅಭ್ಯರ್ಥಿಗಳ ಠೇವಣಿ ಕೈತಪ್ಪಿದೆ. ಚಲಾವಣೆ ಆಗಿರುವ ಮತಗಳ ಪೈಕಿ, ಚುನಾವಣೆಗೆ ಸ್ಪರ್ಧಿಸಿರುವ ಅಭ್ಯರ್ಥಿಯು ಆರನೇ ಒಂದು ಭಾಗವನ್ನು ಗಳಿಸಲು ವಿಫಲವಾದರೆ ಠೇವಣಿ ಕಳೆದುಕೊಳ್ಳಬೇಕಾಗುತ್ತದೆ.

2010ರಲ್ಲಿ ರಾಜ್ಯದಲ್ಲಿ ನಮ್ಮ ಪಕ್ಷಕ್ಕೆ ಶಾಸಕರೇ ಇಲ್ಲದಿದ್ದಾಗ ಕೊಲ್ಕತ್ತಾ ಮುನ್ಸಿಪಲ್ 144 ವಾರ್ಡ್‌ಗಳಲ್ಲಿ ಮೂರು ವಾರ್ಡ್‌ಗಳನ್ನು ಗೆದ್ದಿದ್ದೆವು. ಈ ಬಾರಿ 70 ಶಾಸಕರು ಮತ್ತು 17 ಸಂಸದರ ದಂಡು ಹೊಂದಿದ್ದರೂ, ಪಕ್ಷವು ಮೂರಕ್ಕಿಂತ ಹೆಚ್ಚು ಸ್ಥಾನಗಳನ್ನು ಗಳಿಸಲು ವಿಫಲವಾಗಿದೆ. 2015 ರಲ್ಲಿ ಏಳು ವಾರ್ಡ್‌ಗಳಲ್ಲಿ ಗೆಲ್ಲುವ ಮೂಲಕ ಪಕ್ಷವು ಉತ್ತಮ ಸಾಧನೆ ಮಾಡಿತ್ತು” ಎಂದು ಬಿಜೆಪಿ ನಾಯಕರೊಬ್ಬರು ಹೇಳಿದ್ದಾರೆ.



Join Whatsapp