ಪೊಲೀಸರಿಂದ ಕಿರುಕುಳಕ್ಕೊಳಗಾದ ಬಾಲಕಿಗೆ 1.5 ಲಕ್ಷ ರೂ. ಪರಿಹಾರಕ್ಕೆ ಕೇರಳ ಹೈಕೋರ್ಟ್ ಆದೇಶ

Prasthutha|

ಮಂಜೇರಿ: ಕಳ್ಳತನದ ಆರೋಪದಲ್ಲಿ ಕೇರಳ ಪೊಲೀಸರಿಂದ ಕಿರುಕುಳಕ್ಕೊಳಗಾದ ಎಂಟರ ಹರೆಯದ ಬಾಲಕಿಗೆ ಹೈಕೋರ್ಟ್ 1.5 ಲಕ್ಷ ರೂ. ಪರಿಹಾರ ಮಂಜೂರು ಮಾಡಿದೆ. ಬಾಲಕಿ ತನ್ನ ತಂದೆಯೊಂದಿಗೆ ಸಾರ್ವಜನಿಕ ರಸ್ತೆಯಲ್ಲಿ ಸಾಗುತ್ತಿದ್ದ ವೇಳೆ ಮಹಿಳಾ ಪೊಲೀಸ್ ಅಧಿಕಾರಿಯೊಬ್ಬರು ಇಬ್ಬರ ಮೇಲೆ ಕಳ್ಳತನದ ಆರೋಪ ಹೊರಿಸಿ ಕಿರುಕುಳ ನೀಡಿದ್ದರು.

- Advertisement -

ಘಟನೆಗೆ ಸಂಬಂಧಿಸಿದಂತೆ ಪಿಂಕ್ ಪಡೆ ಪೊಲೀಸ್ ಅಧಿಕಾರಿಯ ವಿರುದ್ಧ ಶಿಸ್ತು ಕ್ರಮ ಜರುಗಿಸಬೇಕೆಂದು ಸೂಚಿಸಿದ ಹೈಕೋರ್ಟ್, ಆಕೆಯನ್ನು ಕರ್ತವ್ಯದಿಂದ ವಜಾಗೊಳಿಸಲು ಆದೇಶಿಸಿದೆ. ಪಿಂಕ್ ಪಡೆ ಕೇರಳ ಪೊಲೀಸ್ ವ್ಯವಸ್ಥೆಯ ವಿಶೇಷ ಮಹಿಳಾ ರಕ್ಷಣಾ ತಂಡವಾಗಿದೆ.

ಹೆಣ್ಣುಮಕ್ಕಳನ್ನು ಕೋಪದಲ್ಲಿ ಬೆಳೆಯಲು ಅನುವು ಮಾಡಿಕೊಡಬಾರದು. ತಕ್ಷಣ ಪರಿಹಾರ ಕ್ರಮಗಳನ್ನು ಜಗುಗಿಸಬೇಕಾಗಿದ್ದು, ಸಂವಿಧಾನದ ಅನುಚ್ಛೇದ 21ರ ಅನ್ವಯ ಅವರ ಮೂಲಭೂತ ಹಕ್ಕನ್ನು ಉಲ್ಲಂಘಿಸಲಾಗಿದೆ ಎಂದು ಭಾವಿಸಬೇಕಾಗಿಲ್ಲ ಎಂದು ನ್ಯಾಯಮೂರ್ತಿ ದೇವನ್ ರಾಮಚಂದ್ರನ್ ತಿಳಿಸಿದರು.

- Advertisement -

ಟ್ರಾಫಿಕ್ ನಿಯಂತ್ರಣಕ್ಕೆ ನೆರವಾಗಲು ನಿಯೋಜಿತ ಮಹಿಳಾ ಪಿಂಕ್ ಪಡೆಯ ಅಧಿಕಾರಿ ರಜಿತಾ ಅವರು ಪೊಲೀಸ್ ವಾಹನದಲ್ಲಿ ಇರಿಸಲಾಗಿದ್ದ ತನ್ನ ಮೊಬೈಲ್ ಫೋನ್ ಅನ್ನು ತಂದೆ ಮಗಳು ಕಳ್ಳತನ ಮಾಡಿದ್ದಾರೆ ಎಂದು ಆರೋಪ ಹೊರಿಸಿ ಕಿರುಕುಳ ನೀಡಿದ್ದರು. ಆದರೆ ಆ ಬಳಿಕ ಮೊಬೈಲ್ ಫೋನ್ ಪೊಲೀಸ್ ವಾಹನದಲ್ಲೇ ಪತ್ತೆಯಾದ ಹಿನ್ನೆಲೆಯಲ್ಲಿ ಪೊಲೀಸ್ ಅಧಿಕಾರಿ ರಜಿತಾ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು.

Join Whatsapp