ಸಶಸ್ತ್ರ ಸೀಮಾ ಬಲದ ಪಥ ಸಂಚಲನದ ಅತಿಥಿ ಸ್ಥಾನದಿಂದ ಮಂತ್ರಿ ಮಿಶ್ರಾಗೆ ಕೊಕ್
Prasthutha: December 20, 2021

ನವದೆಹಲಿ: ಸೋಮವಾರ ಅಂತಿಮ ಕ್ಷಣದಲ್ಲಿ ಸಶಸ್ತ್ರ ಸೀಮಾ ಬಲದ ಸಂಸ್ಥಾಪನಾ ದಿನದ ಪಥ ಸಂಚಲನದ ಮುಖ್ಯ ಅತಿಥಿ ಸ್ಥಾನದಿಂದ ಕೇಂದ್ರ ಗೃಹ ರಾಜ್ಯ ಸಚಿವ ಅಜಯ್ ಕುಮಾರ್ ಮಿಶ್ರಾರಿಗೆ ಕೊಕ್ ನೀಡಿ ಅವರ ಸಹ ಸಚಿವ ನಿಶತ್ ಪುರಾಣಿಕ್ ರನ್ನು ಅತಿಥಿಯಾಗಿಸಲಾಯಿತು.
ಅಜಯ್ ಮಿಶ್ರಾ ಅವರ ಮಗ ಆಶಿಸ್ ಮಿಶ್ರಾ ರೈತರ ಕೊಲೆಗೆ ಕಾರಣವಾದ ಲಖಿಂಪುರ ಖೇರಿಯ ಆರೋಪಿಗಳಲ್ಲಿ ಒಬ್ಬರು. ಅಲ್ಲಿ ರೈತರ ಮೇಲೆ ಕಾರು ಹರಿಸಿ ಒಟ್ಟು ಎಂಟು ಸಾವುಗಳಿಗೆ ಕಾರಣವಾಗಿದ್ದರು. ಲಖಿಂಪುರ ಖೇರಿ ಸಚಿವ ಅಜಯ್ ಮಿಶ್ರಾರ ಲೋಕಸಭಾ ಕ್ಷೇತ್ರವಾಗಿದೆ. ಕೊಲ್ಲಲ್ಪಟ್ಟ ರೈತರೊಬ್ಬರ ಮಗ ನಚ್ಚತ್ತರ್ ಸಿಂಗ್ ನೇಪಾಳ ಭೂತಾನ್ ಗಡಿಯಲ್ಲಿ ಕಾವಲು ಸೈನಿಕರಾಗಿದ್ದಾರೆ.
ಕಳೆದ ವಾರ ಮತ್ತೆ ಅಜಯ್ ಮಿಶ್ರಾ ಲಖಿಂಪುರ ಖೇರಿ ಘಟನೆ ಸಂಬಂಧ ಪತ್ರಕರ್ತರೊಬ್ಬರಿಗೆ ಕೆಟ್ಟದಾಗಿ ಬೈಯುತ್ತ ಹೊಡೆಯಲು ಹೋದ ವೀಡಿಯೋ ವೈರಲ್ ಆಗಿತ್ತು. ಅಜಯ್ ಮಿಶ್ರಾ ರಾಜೀನಾಮೆಗೆ ಪ್ರತಿಪಕ್ಷದವರು ಒತ್ತಾಯ ಮಾಡುತ್ತಲೇ ಇದ್ದಾರೆ.
