ಕೊಡಗು: ಮಹಿಳೆಗೆ ಚಾಕುವಿನಿಂದ ಇರಿದು ಹಲ್ಲೆ; 18 ವರ್ಷಗಳ ನಂತರ ಆರೋಪಿಯ ಬಂಧನ

Prasthutha|

ಮಡಿಕೇರಿ: 18 ವರ್ಷಗಳ ಹಿಂದೆ ಮಹಿಳೆಯೊಬ್ಬರಿಗೆ ಚಾಕುವಿನಿಂದ ಇರಿದು ಹಲ್ಲೆ ನಡೆಸಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ ಘಟನೆ  ಸೋಮವಾರಪೇಟೆಯಲ್ಲಿ ನಡೆದಿದೆ.

- Advertisement -

ಆರೋಪಿಯನ್ನು ಕುಂಬಾರಗಡಿಗೆ ನಿವಾಸಿ ತಂಬುಕುತ್ತಿರ ಕಾರ್ಯಪ್ಪ ಎಂದು  ಗುರುತಿಸಲಾಗಿದೆ. ಆರೋಪಿಯು  ಸುಂಟಿಕೊಪ್ಪ ಸಮೀಪದ ಎಸ್ಟೇಟ್‌ನಲ್ಲಿರುವುದಾಗಿ ಮಾಹಿತಿ ಪಡೆದುಕೊಂಡ ಪೊಲೀಸರು ಆತನನ್ನು ಬಂಧಿಸಿದ್ದಾರೆ. ಈತ ಬೆಟ್ಟದಕೊಪ್ಪ ನಿವಾಸಿ ರುಕ್ಮಿಣಿ ಎಂಬವರ ಮೇಲೆ 2004ರ ಜನವರಿ 15ರಂದು ಆರೋಪಿಯು ಕ್ಷುಲ್ಲಕ ವಿಚಾರಕ್ಕೆ ಚಾಕುವಿನಿಂದ ಇರಿದು ಪರಾರಿಯಾಗಿದ್ದ ಎನ್ನಲಾಗಿದೆ.

ಕಾರ್ಯಾಚರಣೆಯಲ್ಲಿ ಪೊಲೀಸ್ ಇನ್‌ಸ್ಪೆಕ್ಟರ್ ಬಿ.ಜಿ. ಮಹೇಶ್, ಠಾಣಾಧಿಕಾರಿ ವಿರೂಪಾಕ್ಷ, ಹೆಡ್‌ ಕಾನ್‌ಸ್ಟೆಬಲ್‌ ಕುಮಾರ್, ಸಿಬ್ಬಂದಿ ಕೇಶವಮೂರ್ತಿ ತೀರ್ಥೇಶ್, ರಮೇಶ್, ಬಸಪ್ಪ ಭಾಗವಹಿಸಿದ್ದರು.

Join Whatsapp