ಕೊಡಗು: ಕಾಡಾನೆ ದಾಳಿ| ಗಂಭೀರ ಗಾಯಗೊಂಡ ಅರಣ್ಯ ಇಲಾಖೆ ಸಿಬ್ಬಂದಿ

Prasthutha|

ಕೊಡಗು: ಕಾಡಾನೆ ದಾಳಿಯಲ್ಲಿ ಅರಣ್ಯ ಇಲಾಖೆಯ ಸಿಬ್ಬಂದಿಯೋರ್ವರು ಗಂಭೀರ ಗಾಯಗೊಂಡ ಘಟನೆ ಜಿಲ್ಲೆಯ ಪೊನ್ನಂಪೇಟೆ ತಾಲ್ಲೂಕಿನ ಬೇಗೂರು ಗ್ರಾಮದ ಚಿನಿವಾಡ ಪೈಸಾರಿಯಲ್ಲಿ ನಡೆದಿದೆ.

- Advertisement -

ಕೆಲ ದಿನಗಳ ಹಿಂದೆ ಕಾಡಾನೆ ಮರಿಗೆ ಜನ್ಮ ನೀಡಿದ್ದು, ಜನಿಸುತ್ತಲೇ ಕಾಡಾನೆಯ ಮರಿ ಸಾವನ್ನಪ್ಪಿತ್ತು. ಈ ಹಿನ್ನೆಲೆಯಲ್ಲಿ ಸ್ಥಳಕ್ಕೆ ಭೇಟಿ ನೀಡಿದ್ದ RRT ಸಿಬ್ಬಂದಿ ತೇಜಸ್ ಎಂಬವರನ್ನು ಕಾಡಾನೆ ಬೆನ್ನಟ್ಟಿದ್ದು, ದಾಳಿಯಿಂದ ತಪ್ಪಿಸಿಕೊಳ್ಳಲು ಓಡುವ ಸಂದರ್ಭ ಬಿದ್ದು ಅವರು ಗಂಭೀರ ಗಾಯ‌ಗೊಂಡಿದ್ದಾರೆ.

ತೀವ್ರ ಗಾಯಗೊಂಡಿರುವ ತೇಜಸ್, ಸುಳ್ಯ ಆಸ್ಪತ್ರೆಗೆ ದಾಖಲಾಗಿದ್ದಾರೆ.

Join Whatsapp