ಕೊಡಗು: ಕಾರ್ಯಾಚರಣೆ ಸಂದರ್ಭ ಪರಾರಿಯಾದ ಹುಲಿ

Prasthutha|

ಮಡಿಕೇರಿ: ಹಾಡಹಗಲೇ ಸಾರ್ವಜನಿಕರ ಎದುರು ಕಾಣಿಸಿಕೊಂಡು ಜಾನುವಾರುಗಳ ಮೇಲೆ ಧಾಳಿ ನಡೆಸಿ ಸಾಯಿಸುತ್ತಿದ್ದ ಹುಲಿಯು ಕಾರ್ಯಾಚರಣೆ ತಂಡದಿಂದ ತಪ್ಪಿಸಿಕೊಂಡು ಪರಾರಿಯಾಗಿರುವ ಘಟನೆ ನಡೆದಿದೆ.

- Advertisement -

ವಿರಾಜಪೇಟೆ ತಾಲ್ಲೂಕಿನ ಸಿದ್ದಾಪುರ ಸಮೀಪದ ಬಾಡಗಬಾಣಂಗಾಲ ಗ್ರಾಮದ ಘಟ್ಟದಳ ಸಮೀಪ ಹುಲಿಯ ಕಾರ್ಯಾಚರಣೆ ತಂಡವು ಅರವಳಿಕೆ ಚುಚ್ಚು ಮದ್ದನ್ನು ಪ್ರಯೋಗಿಸಿದ ಸಂದರ್ಭದಲ್ಲಿ ಹುಲಿಯು ತಪ್ಪಿಸಿಕೊಂಡು ಮುಖ್ಯ ರಸ್ತೆಯ ಮೂಲಕ ಸಂಚರಿಸಿ ಸಮೀಪದ ಅರಣ್ಯ ಪ್ರದೇಶಕ್ಕೆ ಪ್ರವೇಶಿಸಿದೆ.

ಈ ಭಾಗದ ಕಾಫಿ ತೋಟಗಳಲ್ಲಿ ಬೀಡುಬಿಟ್ಟಿರುವ ಹುಲಿಯು ಜಾನುವಾರುಗಳ ಮೇಲೆ ನಿರಂತರವಾಗಿ ಧಾಳಿ ನಡೆಸುತ್ತಿದ್ದರಿಂದ ಹುಲಿಯನ್ನು ಸೆರೆ ಹಿಡಿಯುವಂತೆ ಒತ್ತಾಯ ಹೆಚ್ಚಾಗಿತ್ತು. ಅರಣ್ಯ ಇಲಾಖೆಯ ಅಧಿಕಾರಿಗಳು ದುಬಾರೆಯ ಸಾಕಾನೆಗಳ ಶಿಬಿರದ ನಾಲ್ಕು ಸಾಕಾನೆಗಳ ಮೂಲಕ ಹುಲಿ ಕಾರ್ಯಾಚರಣೆಗೆ ಮುಂದಾಗಿತ್ತು.

- Advertisement -

ಕಳೆದ ನಾಲ್ಕು ದಿನಗಳಿಂದ ಕಾರ್ಯಾಚರಣೆ ನಡೆಯುತ್ತಿದ್ದು, ಕಾರ್ಯಾಚರಣೆ ನಡೆಸುವ ಸಂದರ್ಭದಲ್ಲಿ ಇಂದು ಪೂರ್ವಾಹ್ನ ಹುಲಿ ಪತ್ತೆಯಾಯಿತು. ತಕ್ಷಣ ವನ್ಯ ಜೀವಿ ವೈದ್ಯಾಧಿಕಾರಿ ಡಾ. ಚಿಟ್ಟಿಯಪ್ಪ ಹಾಗೂ ಕುಶಾಲನಗರ ಉಪವಲಯ ಅರಣ್ಯಾಧಿಕಾರಿ ಹಾಗೂ ಶೂಟರ್ ಕನ್ನಂಡ ರಂಜನ್ ಸೇರಿ ಹುಲಿಗೆ ಅರವಳಿಕೆ ಚುಚ್ಚು ಮದ್ದನ್ನು ಪ್ರಯೋಗಿಸಿದ  ಸಂದರ್ಭ ಹುಲಿಯು ಕಾಫಿ ತೋಟದ ಒಳಗಿನಿಂದ ಸಮೀಪದ ಮಾಲ್ದಾರೆ ವ್ಯಾಪ್ತಿಯ ಅರಣ್ಯ ಪ್ರದೇಶದ ಒಳಗೆ ಸೇರಿತು. ಬೃಹತ್ ಗಾತ್ರದ ಹುಲಿಯ ಚಿತ್ರ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿತ್ತು.

Join Whatsapp