ಕೊಡಗು: ಅರಣ್ಯ ಸಂರಕ್ಷಣೆ ಅಧಿಕಾರಿಗಳಿಂದಲೇ ಮರಗಳ ಹನನ!

Prasthutha: January 15, 2022

ಕೊಡಗು: ಅರಣ್ಯ ಸಂರಕ್ಷಣೆ ಅಧಿಕಾರಿಗಳೇ ಮರಗಳನ್ನು ಹನನ ಮಾಡಿರುವ ಘಟನೆ ಮಡಿಕೇರಿಯಲ್ಲಿ ನಡೆದಿದೆ.

ಮಡಿಕೇರಿಯ ಸಾಮಾಜಿಕ ಅರಣ್ಯ ವಿಭಾಗದ ಉಪಾರಣ್ಯ ಸಂರಕ್ಷಣಾಧಿಕಾರಿಯಾದ ಹೆಚ್ ಪೂರ್ಣಿಮಾ ಎಂಬವರಿಗೆ ವಾಸಮಾಡಲು ವಸತಿಗೃಹ ನಿರ್ಮಾಣಕ್ಕೆ ಮಡಿಕೇರಿ ಅರಣ್ಯ ಇಲಾಖೆಯಿಂದ ಸೂಚಿಸಲಾಗಿತ್ತು. ಇದಕ್ಕಾಗಿ 20 ವರ್ಷಗಳಿಂದ ದಟ್ಟವಾಗಿ ಬೆಳೆದ ಪೈನೆಸ್, ನಂದಿ, ಹೆಬ್ಬಲಸು ಮರಗಳನ್ನು ಸಾಮಾಜಿಕ ಅರಣ್ಯ ವಿಭಾಗದ ಉಪವಲಯ ಅಧಿಕಾರಿಯಾದ ಮಯೂರ್ ಕರ್ವೆಕರ್ ಮುಂದಾಳತ್ವದಲ್ಲಿ ಕಡಿಸಿ ತಮಗೆ ಬೇಕಾದ ವಸತಿ ಗ್ರಹ ನಿರ್ಮಾಣ ಮಾಡಲು ಸ್ಥಳವನ್ನು ಸಿದ್ದಪಡಿಸಿ ಕೊಂಡಿರುವುದಾಗಿ ವರದಿಯಾಗಿದೆ.

 ನ್ಯಾಷನಲ್ ಸೋಷಿಯಲ್ ಕ್ರೈಂ ಇನ್ಫಾರ್ಮೇಶನ್ ಬ್ಯೂರೋ ಸ್ಥಳಕ್ಕೆ ದಾಳಿ ಮಾಡಿ ಮಾಹಿತಿ ಕಲೆ ಹಾಕಿದಾಗ ಅಕ್ರಮವಾಗಿ ಮರಗಳನ್ನು ಕಡಿಯುತ್ತಿದ್ದವರನ್ನು ವಿಚಾರಿಸಿದಾಗ ಅಲ್ಲೇ ಇದ್ದ ಅಧಿಕಾರಿ ಕಾಲ್ಕಿತ್ತಿದ್ದಾರೆ ಎನ್ನಲಾಗಿದೆ.

ಕಾಡುಬೆಳೆಸಿ ನಾಡು ಉಳಿಸಿ ಅನ್ನುವವರು ಈ ರೀತಿ ಅಧಿಕಾರವನ್ನು ದುರುಪಯೋಗಪಡಿಸಿಕೊಳ್ಳುವುದಲ್ಲದೆ ದರ್ಪತೋರಿಸಿ ಕೆಲಸ ಪ್ರಾರಂಬಿಸಿದ್ದಾರೆ. ಅಷ್ಟೇ ಅಲ್ಲದೆ ಅರಣ್ಯ ಇಲಾಖೆಯ ಕೆಲಸ ಕಾರ್ಯಕ್ಕಾಗಿ ಅರ್ಜಿ ಹಾಕಿದವರ ಅರ್ಜಿಯನ್ನು ತಿರಸ್ಕರಿಸಿದ್ದು ಸ್ವಂತ ಕೆಲಸಕ್ಕಾಗಿ ಮರಗಳನ್ನು ಮಾರಣಹೋಮ ಮಾಡುತ್ತಿದ್ದಾರೆ. ಮೇಲಾಧಿಕಾರಿಗಳು ಸೂಕ್ಷ್ಮ ವಾಗಿ ಪರಿಗಣಿಸಿ ವಿಚಾರಣೆಗೆ ಒಳಪಡಿಸಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.  

ನಿಮ್ಮ ಚಂದಾ ಹಣ ಪಾವತಿಸಲು ಈ ಕೆಳಗಿನ ಬಟನ್ ಮೇಲೆ ಕ್ಲಿಕ್ ಮಾಡಿ.

ಜನಪರ ಪತ್ರಿಕೋದ್ಯಮವನ್ನು ಬೆಂಬಲಿಸಿ
ಪ್ರಸ್ತುತದ ಬೆಳವಣಿಗೆಯಲ್ಲಿ ಪಾಲುದಾರರಾಗಿ
ಜನಸಾಮಾನ್ಯರ ಜ್ವಲಂತ ಸಮಸ್ಯೆಗಳಿಗೆ ಸದಾ ಮಿಡಿಯುತ್ತಾ, ಧ್ವನಿ ಇಲ್ಲದ ಸಮುದಾಯಗಳ ಧ್ವನಿಯಾಗುತ್ತಾ ಮಾಧ್ಯಮ ಲೋಕದಲ್ಲಿ ಸ್ವತಂತ್ರವಾಗಿ ಕಾರ್ಯಾಚರಿಸುತ್ತಿರುವ ಪ್ರಸ್ತುತಕ್ಕೆ ನಿಮ್ಮ ಪ್ರೋತ್ಸಾಹ, ಬೆಂಬಲ ಯಾವತ್ತೂ ಇರಲಿ. ಪ್ರಸ್ತುತಕ್ಕೆ ದೇಣಿಗೆ ನೀಡಲು ಬಯಸುವವರು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ಹಣವನ್ನು ಪಾವತಿಸಬಹುದು.

ಧನ್ಯವಾದಗಳು

ಟಾಪ್ ಸುದ್ದಿಗಳು

ವಿಶೇಷ ವರದಿ

error: Content is protected !!