ಅಲೆಕ್ಸಾಂಡರ್ ದಿ ಗ್ರೇಟ್ ಅಲ್ಲ, ಚಂದ್ರಗುಪ್ತ ಮೌರ್ಯ ಗ್ರೇಟ್ ಎಂದ ಆದಿತ್ಯನಾಥ್

Prasthutha|

ಲಕ್ನೋ: ಇತಿಹಾಸಕಾರರು ನೈಜ ಇತಿಹಾಸವನ್ನು ತಿರುಚಿ ಚಂದ್ರಗುಪ್ತ ಮೌರ್ಯನ ಬದಲು ಅಲೆಕ್ಸಾಂಡರ್ ನನ್ನು ವೈಭವೀಕರಿಸಿರುವುದು ದುರಂತ ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ್ ಆರೋಪಿಸಿದ್ದಾರೆ.

- Advertisement -

ಮಾತ್ರವಲ್ಲ ಚಂದ್ರಗುಪ್ತ ಮೌರ್ಯನಿಂದ ಸೋತ ಅಲೆಕಾಂಡರ್ ನನ್ನು ಶ್ರೇಷ್ಠ ಎಂದು ಕರೆಯುವ ಮೂಲಕ ಇತಿಹಾಸಕಾರರು ಭಾರತಕ್ಕೆ ವಂಚನೆ ಮಾಡಿದ್ದಾರೆ ಎಂದು ದೂರಿದ್ದಾರೆ. ಇದರೊಂದಿಗೆ ಆದಿತ್ಯನಾಥ್ ಅವರಿಗೆ ಭಾರತದ ಇತಿಹಾಸದ ಬಗೆಗಿನ ಅಲ್ಪ ಜ್ಞಾನ ಪ್ರದರ್ಶಿಸಿ ಮತ್ತೊಮ್ಮೆ ನಗೆಪಾಟಲಿಗೀಡಾಗಿದ್ದಾರೆ.

ಲಕ್ನೋದಲ್ಲಿ ನಡೆದ ಸಾಮಾಜಿಕ ಪ್ರತಿನಿಧಿ ಸಮ್ಮೇಳನದಲ್ಲಿ ಮಾತನಾಡಿದ ಆದಿತ್ಯನಾಥ್ ಈ ಮೇಲಿನಂತೆ ಪ್ರತಿಕ್ರಿಯಿಸಿ ನೆಟ್ಟಿಗರ ಟ್ರೋಲ್ ಗೆ ತುತ್ತಾಗಿದ್ದಾರೆ.

Join Whatsapp