ಮಡಿಕೇರಿ: ನಾಡಿನ ಅಧಿದೇವತೆ ಮಾತೆ ಕಾವೇರಿ ಹಾಗೂ ಯುವತಿಯರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ ವ್ಯಕ್ತಿಯ ಬಂಧನಕ್ಕೆ 24 ಗಂಟೆಗಳ ಗಡುವು ನೀಡಿ ಉಗ್ರ ಪ್ರತಿಭಟನೆ ಮಾಡಿ ಕೊಡಗು ಬಂದ್ ಗೆ ಕುಲದೀಪ್ ಪೂಣಚ್ಚ ಕರೆ ನೀಡಿದ್ದಾರೆ.
ಕೊಡಗಿನ ಕುಲದೇವತೆ ಮಾತೆ ಕಾವೇರಿಯ ಬಗ್ಗೆ ಹಾಗೂ ಯುವತಿಯರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ ವ್ಯಕ್ತಿಯನ್ನು 24 ಗಂಟೆಯೊಳಗೆ ಬಂಧಿಸುವಂತೆ ಆಗ್ರಹಿಸುತ್ತಿದ್ದೇವೆ. ಪ್ರಪಂಚ ದಾದ್ಯಂತ ಇರುವ ಅನೇಕ ಕಾವೇರಿ ತಾಯಿಯ ಭಕ್ತರ ಮನಸ್ಸಿಗೆ ಈ ಹೇಳಿಕೆಯಿಂದ ನೋವುಂಟಾಗಿದ್ದು, ಮಾತೆ ಕಾವೇರಿ ಯನ್ನು ಎಲ್ಲಾ ವರ್ಗದ ಜನರೂ ಪೂಜಿಸಿ ಆರಾಧಿಸುತ್ತಾರೆ. ಈ ಹೇಳಿಕೆಯನ್ನು ನೀಡುವ ಮೂಲಕ ಆ ವ್ಯಕ್ತಿಯು ಸಮಾಜದ ಶಾಂತಿಯನ್ನು ಕದಡುವ ಉದ್ದೇಶವನ್ನಿಟ್ಟುಕೊಂಡಿದ್ದಾನೆ. ಆರೋಪಿಯನ್ನು ತಕ್ಷಣ ಬಂಧಿಸಬೇಕು ಎಂದು ಹೇಳಿದರು.
ಇಲ್ಲದಿದ್ದರೆ ಸಂಘ ಪರಿವಾರದ ನೇತೃತ್ವದಲ್ಲಿ ಉಗ್ರ ಪ್ರತಿಭಟನೆ ಹಾಗೂ ಕೊಡಗು ಬಂದ್ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ.