ಕೊಡಗು: ಸೆ.26 ರಿಂದ 14 ದಿನ ದಸರಾ ರಜೆ ಘೋಷಣೆ

Prasthutha|

ಮಡಿಕೇರಿ: ದಸರಾ ಹಬ್ಬದ ಪ್ರಯುಕ್ತ ಕೊಡಗಿನಲ್ಲಿ ಸೆ.26 ರಿಂದ 14 ದಿನ ರಜೆ ಘೋಷಣೆ ಮಾಡಿ ಜಿಲ್ಲಾಧಿಕಾರಿ ಬಿಸಿ ಸತೀಶ್ ಆದೇಶ ಹೊರಡಿಸಿದ್ದಾರೆ.

ದಸರಾ ಹಬ್ಬದ ಹಿನ್ನಲೆ ಪ್ರತಿ ಜಿಲ್ಲೆಗಳಿಗೂ ಅಲ್ಲಿನ ಹಬ್ಬದ ಆಚರಣೆಯನ್ನು ಗಮನಿಸಿ ರಜೆ ನೀಡುವಂತೆ ಶಿಕ್ಷಣ ಇಲಾಖೆ ಸೂಚನೆ ನೀಡಿತ್ತು. ಹಾಗಾಗಿ ಜಿಲ್ಲಾಧಿಕಾರಿಯವರು ಕೊಡಗು ಜಿಲ್ಲೆಗೆ ಸೆಪ್ಟೆಂಬರ್ 26ರಿಂದ ಅಕ್ಟೋಬರ್ 9ರವರೆಗೆ ಸಾರ್ವತ್ರಿಕ ರಜೆ ಘೋಷಣೆ ಮಾಡಿ ಆದೇಶ ಹೊರಡಿಸಿದ್ದಾರೆ.

- Advertisement -