ನೂತನ ಯುಎಇ T20 ಲೀಗ್: ಅಬುಧಾಬಿ ಫ್ರಾಂಚೈಸಿಯ ಹಕ್ಕು ಪಡೆದುಕೊಂಡ ನೈಟ್ ರೈಡರ್ಸ್

Prasthutha: May 13, 2022

🖊️Anon Suf

ದುಬೈ: ಯುಎಇಯಲ್ಲಿ ನಡೆಯಲಿರುವ ನೂತನ ಯುಎಇ T20 ಕ್ರಿಕೆಟ್ ಲೀಗ್ ನಲ್ಲಿ ಅಬುಧಾಬಿ ಫ್ರಾಂಚೈಸಿಯನ್ನು ಬಾಲಿವುಡ್ ನಟ ಶಾರೂಖ್ ಖಾನ್ ಒಡೆತನದ ನೈಟ್ ರೈಡರ್ಸ್ ಖರೀದಿಸಿದೆ. ಆ ಮೂಲಕ ಇಂಡಿಯನ್ ಪ್ರೀಮಿಯರ್ ಲೀಗಿನ ಕೋಲ್ಕತ್ತ ತಂಡದ ಒಡೆತನವನ್ನೂ ಹೊಂದಿರುವ ನೈಟ್ ರೈಡರ್ಸ್ ತಮ್ಮ ಹೊಸ ಫ್ರಾಂಚೈಸಿ ಯಾಗಿ ಅಬುಧಾಬಿಯನ್ನೂ ಪಡೆದುಕೊಂಡಿದೆ. ಕೆಕೆಆರ್ ನಲ್ಲಿ ಶಾರೂಖ್ ಖಾನ್ ಜೊತೆಗೆ ನಟಿ ಜೂಹಿ ಚಾವ್ಲಾ ಮತ್ತವರ ಪತಿ ಜಯ್ ಮೆಹ್ತಾ ಕೂಡಾ ಪಾಲುದಾರರಾಗಿದ್ದಾರೆ.

ಭಾರತದ ಪ್ರೀಮಿಯರ್ ಲೀಗಿನಲ್ಲಿ ತನ್ನದೇ ಛಾಪು ಮೂಡಿಸಿರುವ ಕೆಕೆಆರ್ ತಂಡದ ತೆಕ್ಕೆಗೆ ಅಬುಧಾಬಿ ಕೂಡಾ ಒಳಪಟ್ಟಿದೆ. 2008ರಲ್ಲಿ ಕೆಕೆಆರ್ ಸ್ಥಾಪನೆಗೊಂಡ ಬಳಿಕ ನೈಟ್ ರೈಡರ್ಸ್ 2015ರಲ್ಲಿ ಕೆರಿಬಿಯನ್ ಪ್ರೀಮಿಯರ್ ಲೀಗ್ ನಲ್ಲಿ ಟ್ರಿನ್ ಬಾಗೊ ನೈಟ್ ರೈಡರ್ಸ್ (ಟಿಕೆಆರ್) ತಂಡವನ್ನು ಖರೀದಿಸಿತ್ತು. ಅದೇ ರೀತಿ ಇತ್ತೀಚೆಗೆ ನೈಟ್ ರೈಡರ್ಸ್ ಗ್ರೂಪ್ ಅಮೆರಿಕದಲ್ಲಿ ಮೇಜರ್ ಲೀಗ್ ಕ್ರಿಕೆಟ್ (MLC) ನಲ್ಲಿ ಗಮನಾರ್ಹ ಹೂಡಿಕೆ ಮಾಡಿದೆ ಮತ್ತು ಲಾಸ್ ಏಂಜಲೀಸ್ ನಲ್ಲಿ ಫ್ರಾಂಚೈಸ್ ಸ್ಥಾಪಿಸಲು ಉದ್ದೇಶಿಸಿದೆ ಎನ್ನಲಾಗಿದೆ.

ದೀರ್ಘಾವಧಿ ಒಪ್ಪಂದದ ಕುರಿತು ಪ್ರತಿಕ್ರಿಯಿಸಿದ ಶಾರುಖ್ ಖಾನ್, ಈಗ ಹಲವಾರು ವರ್ಷಗಳಿಂದ ನಾವು ಜಾಗತಿಕವಾಗಿ ನೈಟ್ ರೈಡರ್ಸ್ ಬ್ರ್ಯಾಂಡ್ ಅನ್ನು ವಿಸ್ತರಿಸುತ್ತಿದ್ದೇವೆ ಮತ್ತು ಯುಎಇಯಲ್ಲಿ ಟಿ20 ಕ್ರಿಕೆಟ್ ನ ಸಾಮರ್ಥ್ಯವನ್ನು ಸೂಕ್ಷ್ಮವಾಗಿ ಗಮನಿಸಿದ್ದೇವೆ. ಯುಎಇಯ ಟಿ20 ಲೀಗ್ ನ ಭಾಗವಾಗಲು ನಾವು ಉತ್ಸುಕರಾಗಿದ್ದೇವೆ. ಇದು ಅತ್ಯಂತ ಯಶಸ್ವಿಯಾಗುವುದರಲ್ಲಿ ಸಂಶಯವಿಲ್ಲ ಎಂದು ತಿಳಿಸಿದ್ದಾರೆ.

ನಿಮ್ಮ ಚಂದಾ ಹಣ ಪಾವತಿಸಲು ಈ ಕೆಳಗಿನ ಬಟನ್ ಮೇಲೆ ಕ್ಲಿಕ್ ಮಾಡಿ.

ಜನಪರ ಪತ್ರಿಕೋದ್ಯಮವನ್ನು ಬೆಂಬಲಿಸಿ
ಪ್ರಸ್ತುತದ ಬೆಳವಣಿಗೆಯಲ್ಲಿ ಪಾಲುದಾರರಾಗಿ
ಜನಸಾಮಾನ್ಯರ ಜ್ವಲಂತ ಸಮಸ್ಯೆಗಳಿಗೆ ಸದಾ ಮಿಡಿಯುತ್ತಾ, ಧ್ವನಿ ಇಲ್ಲದ ಸಮುದಾಯಗಳ ಧ್ವನಿಯಾಗುತ್ತಾ ಮಾಧ್ಯಮ ಲೋಕದಲ್ಲಿ ಸ್ವತಂತ್ರವಾಗಿ ಕಾರ್ಯಾಚರಿಸುತ್ತಿರುವ ಪ್ರಸ್ತುತಕ್ಕೆ ನಿಮ್ಮ ಪ್ರೋತ್ಸಾಹ, ಬೆಂಬಲ ಯಾವತ್ತೂ ಇರಲಿ. ಪ್ರಸ್ತುತಕ್ಕೆ ದೇಣಿಗೆ ನೀಡಲು ಬಯಸುವವರು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ಹಣವನ್ನು ಪಾವತಿಸಬಹುದು.

ಧನ್ಯವಾದಗಳು

ಟಾಪ್ ಸುದ್ದಿಗಳು

ವಿಶೇಷ ವರದಿ