ಕೆ.ಎಂ. ಶರೀಫ್ ನಿಧನ : ಬಿ.ಸಿ.ರೋಡ್ ಕೈಕಂಬದ ಮಿತ್ತಬೈಲ್ ಮಸೀದಿಯಲ್ಲಿ ಸಂಜೆ 5:30 ಗಂಟೆಗೆ ಅಂತಿಮ ದರ್ಶನಕ್ಕೆ ವ್ಯವಸ್ಥೆ

Prasthutha|

ಬಂಟ್ವಾಳ : ಇಂದು ಮಧ್ಯಾಹ್ನ ನಿಧನರಾದ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಮಾಜಿ ರಾಷ್ಟ್ರೀಯ ಅಧ್ಯಕ್ಷ ಕೆ.ಎಂ. ಶರೀಫ್ ಅವರ ಪಾರ್ಥೀವ ಶರೀರದ ಅಂತಿಮ ದರ್ಶನಕ್ಕೆ ಬಿ.ಸಿ.ರೋಡ್ ಕೈಕಂಬದ ಮಿತ್ತಬೈಲ್ ಮಸೀದಿಯಲ್ಲಿ ಸಂಜೆ 5:30 ಗಂಟೆಗೆ ಅವಕಾಶ ಕಲ್ಪಿಸಲಾಗಿದೆ ಎಂದು ಪಾಪ್ಯುಲರ್ ಫ್ರಂಟ್ ರಾಜ್ಯಾಧ್ಯಕ್ಷ ಯಾಸಿರ್ ಹಸನ್ ತಿಳಿಸಿದ್ದಾರೆ.

- Advertisement -

ಮಿತ್ತಬೈಲ್ ಮಸೀದಿಗೆ ಸಂಜೆ 5:30 ಗಂಟೆಗೆ ಪಾರ್ಥೀವ ಶರೀರವನ್ನು ತರಲಾಗುತ್ತದೆ. ಬಳಿಕ ಸಾರ್ವಜನಿಕರ ಅಂತಿಮ ದರ್ಶನಕ್ಕೆ ಅವಕಾಶ ನೀಡಿ, ಮಿತ್ತಬೈಲ್ ಜುಮಾ ಮಸೀದಿಯ ದಫನ ಭೂಮಿಯಲ್ಲಿ ಅಂತ್ಯಕ್ರಿಯೆ ನೆರವೇರಲಿದೆ ಎಂದು ಅವರು ತಿಳಿಸಿದ್ದಾರೆ.

Join Whatsapp