ನ್ಯಾಯಾಧೀಶರ ನೇಮಕ ಸಮಿತಿಯಲ್ಲಿ ಕೇಂದ್ರ ಸರ್ಕಾರದ ಪ್ರತಿನಿಧಿಗಳು ಇರಬೇಕು ಎಂದ ಕಿರಣ್ ರಿಜಿಜು

Prasthutha|

ನವದೆಹಲಿ: ನ್ಯಾಯಾಧೀಶರನ್ನು ನೇಮಕ ಮಾಡುವ ಸುಪ್ರೀಂ ಕೋರ್ಟಿನ ಕೊಲಿಜಿಯಂನಲ್ಲಿ ಕೇಂದ್ರ ಸರಕಾರದ ಪ್ರತಿನಿಧಿಗಳೂ ಇರಬೇಕು ಎಂದು ಒಕ್ಕೂಟ ಸರಕಾರದ ಕಾನೂನು ಮಂತ್ರಿ ಕಿರಣ್ ರಿಜಿಜು ಅವರು ಸಿಜೆಐ ಡಿ. ವೈ. ಚಂದ್ರಚೂಡರಿಗೆ ಪತ್ರ ಬರೆದಿದ್ದಾರೆ.

- Advertisement -


ಸಾರ್ವಜನಿಕರ ಅಭಿಪ್ರಾಯಕ್ಕೆ ಮನ್ನಣೆ ದೊರೆಯಲು ಮತ್ತು ನ್ಯಾಯಾಧೀಶರ ನೇಮಕಾತಿಯಲ್ಲಿ ಪಾರದರ್ಶಕತೆ ತರಲು ಸುಪ್ರೀಂ ಕೋರ್ಟಿನ ಕೊಲಿಜಿಯಂ ಸಮಿತಿಯಲ್ಲಿ ಸರಕಾರದ ಪ್ರತಿನಿಧಿಗಳೂ ಇರುವುದು ಅಗತ್ಯ ಎಂದು ಕಾನೂನು ಸಚಿವರು ಸಿಜೆಐ ಅವರಿಗೆ ಪತ್ರ ಬರೆದಿರುವುದಾಗಿ ತಿಳಿದು ಬಂದಿದೆ.
ಅಷ್ಟೇ ಅಲ್ಲದೆ ಕೊಲಿಜಿಯಂನಲ್ಲಿ ರಾಜ್ಯ ಸರಕಾರಗಳ ಪ್ರತಿನಿಧಿಗಳೂ ಇರಬೇಕು ಎಂಬ ಮಾತನ್ನು ಸಹ ಕಿರಣ್ ರಿಜಿಜುರವರು ಪತ್ರದಲ್ಲಿ ಬರೆದಿದ್ದಾರೆ.
ಇದನ್ನು ದೊಡ್ಡ ಅಪಾರದರ್ಶಕತೆ ಎಂದು ಅವರು ಹೇಳುತ್ತಿದ್ದಾರೆಯೇ ಎಂದು ಇತ್ತೀಚೆಗೆ ನ್ಯಾಯಾಂಗ ನೇಮಕಾತಿಗಳನ್ನು ಬಿಜೆಪಿಯ ಹಲವು ಮಂತ್ರಿಗಳು, ಉಪರಾಷ್ಟ್ರಪತಿ ಜಗದೀಪ್ ದನ್ಕರ್ ಮೊದಲಾದವರು ಟೀಕಿಸಿದ್ದಾರೆ.


1993ರಿಂದಲೂ ಉನ್ನತ ಕೋರ್ಟುಗಳ ನ್ಯಾಯಾಧೀಶರ ನೇಮಕಾತಿಯು ಸುಪ್ರೀಂ ಕೋರ್ಟ್ ಕೊಲಿಜಿಯಂನದಾಗಿರುವುದನ್ನು ಬದಲಿಸಿ ಸರಕಾರದ ಪ್ರತಿನಿಧಿಗಳೂ ಅದರಲ್ಲಿ ಇರುವಂತೆ ಮಾಡಬೇಕು ಎನ್ನುವುದು ಅವರೆಲ್ಲರ ವಾದವಾಗಿದೆ.
ಆದರೆ ಸುಪ್ರೀಂ ಕೋರ್ಟ್, ಕೊಲೀಜಿಯಂ ಪದ್ಧತಿಯನ್ನು ಗಟ್ಟಿಯಾಗಿ ಸಮರ್ಥಿಸಿಕೊಂಡಿದೆ.
ಕೊಲಿಜಿಯಂ ಪದ್ಧತಿಯು ಹೊರಗಿನದ್ದು. ಸರಕಾರಕ್ಕೆ ನ್ಯಾಯಾಧೀಶರ ನೇಮಕಾತಿಯಲ್ಲಿ ಹಕ್ಕಿಲ್ಲದಂತೆ ಮಾಡಿರುವ ಅದು ಇರಬಾರದು ಎಂದು ಸಹ ಕಿರಣ್ ರಿಜಿಜು ಹೇಳಿದ್ದಾರೆ.
2014ರಲ್ಲಿ ಬಿಜೆಪಿ ಸರಕಾರವು ಜಾರಿಗೆ ತಂದ ಕಾನೂನಿನ ಮೂಲಕ ರಚಿಸಲಾಗಿರುವ ರಾಷ್ಟ್ರೀಯ ನ್ಯಾಯಾಂಗ ನೇಮಕಾತಿ ಆಯೋಗವನ್ನು ಸರ್ವೋಚ್ಚ ನ್ಯಾಯಾಲಯವು ಅನೂರ್ಜಿತ ಗೊಳಿಸಿರುವುದನ್ನು ಸಹ ಅವರು ಟೀಕಿಸಿದ್ದಾರೆ. ಈ ಆಯೋಗವು ಸರಕಾರ ಮತ್ತು ನ್ಯಾಯಾಂಗವೆರಡರ ಸದಸ್ಯರಿಗೂ ಅವಕಾಶ ಮಾಡಿತ್ತು.

- Advertisement -


ಉಪರಾಷ್ಟ್ರಪತಿ ಜಗದೀಪ್ ದನ್ಕರ್ ಹಲವಾರು ವೇದಿಕೆಗಳಲ್ಲಿ ಇದೇ ಮಾತನ್ನು ಪ್ರತಿಧ್ವನಿಸಿದ್ದಾರೆ. ಒಬ್ಬರ ಮೇಲುಗೈಯನ್ನು ಸಾರ್ವಜನಿಕರ ಪರ ಎಂದು ನ್ಯಾಯಾಂಗವು ಒಂದೇ ಭಂಗಿಯಲ್ಲಿ ನಿಲ್ಲಿಸಿಡುವುದು ಸರಿಯಲ್ಲ. ನ್ಯಾಯಾಂಗ ಆಯೋಗವನ್ನು ಅನೂರ್ಜಿತ ಮಾಡಿರುವುದು, ಸಂಸತ್ತಿನ ತೀರ್ಮಾನವನ್ನೇ ಅಲ್ಲಗಳೆದಂತೆ. ಇದು ಪ್ರಜಾಪ್ರಭುತ್ವ ದೇಶದಲ್ಲಿ ಎಲ್ಲೂ ನಡೆದುದು ಇತಿಹಾಸದಲ್ಲೇ ಇಲ್ಲ ಎಂದೂ ಅವರು ಹೇಳಿದ್ದಾರೆ.


ಅವರು 1973ರ ನ್ಯಾಯ ತೀರ್ಪನ್ನು ಸಹ ಪ್ರಶ್ನಿಸಿದ್ದಾರೆ. ಸರಕಾರವು ಸಂವಿಧಾನವನ್ನು ತಿದ್ದಬಹುದು, ಆದರೆ ಅದರ ಮೂಲ ರೂಪವನ್ನು, ಸಂರಚನೆಯನ್ನು ಅಲ್ಲ ಎಂದರೆ ಹೇಗೆ ಎಂಬುದು ಅವರ ಪ್ರಶ್ನೆ.
ಕೊಲಿಜಿಯಂ ಪದ್ಧತಿಯು ಈ ನೆಲದ ಕಾನೂನು ಅದನ್ನು ಗಟ್ಟಿಯಾಗಿ ಅನುಸರಿಸಲಾಗುವುದು ಎಂದು ಸುಪ್ರೀಂ ಕೋರ್ಟು ಸ್ಪಷ್ಟವಾಗಿ ಹೇಳಿದೆ. ಸಮಾಜದ ಕೆಲವೇ ಕೆಲವು ವರ್ಗದ ಜನರು ಕೊಲಿಜಿಯಂ ಪದ್ಧತಿಯನ್ನು ಟೀಕಿಸಿದರು ಎಂದ ಮಾತ್ರಕ್ಕೆ ಅದನ್ನು ದುರ್ಬಲವಾಗಲು ಬಿಡುವುದಿಲ್ಲ ಎಂದೂ ಸುಪ್ರೀಂಕೋರ್ಟ್ ಹೇಳಿದೆ.
ಈಗಿನ ಕೊಲಿಜಿಯಂನಲ್ಲಿ ಸಿಜೆಐ ಡಿ. ವೈ. ಚಂದ್ರಚೂಡ್, ಜಸ್ಟಿಸ್ ಗಳಾದ ಸಂಜಯ್ ಕಿಶನ್ ಕೌಲ್, ಕೆ. ಎಂ. ಜೋಸೆಫ್, ಎಂ. ಆರ್. ಶಾ, ಅಜಯ್ ರಸ್ಟೋಗಿ, ಸಂಜೀವ್ ಖನ್ನಾ ಇದ್ದಾರೆ.

Join Whatsapp