ಕಿನ್ಯಾ: ಆಟದ ಮೈದಾನ ನಿರ್ಮಿಸಲು ಪಂಚಾಯತ್ ಅಭಿವೃದ್ಧಿ ಅಧಿಕಾರಿಗೆ ಮನವಿ ಸಲ್ಲಿಸಿದ ಕ್ಯಾಂಪಸ್ ಫ್ರಂಟ್

Prasthutha|

ಮಂಗಳೂರು: ಕಿನ್ಯಾ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಶೀಘ್ರವಾಗಿ ಆಟದ ಮೈದಾನ ನಿರ್ಮಿಸಲು ಪಂಚಾಯತ್ ಅಭಿವೃದ್ಧಿ ಅಧಿಕಾರಿಗೆ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಮನವಿ ಸಲ್ಲಿಸಿದೆ.

- Advertisement -

“ಕಿನ್ಯಾ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಆಟದ ಮೈದಾನದ ಕೊರತೆಯು ದಿನದಿಂದ ದಿನಕ್ಕೆ ಕಾಡುತ್ತಿದ್ದು, ಇಲ್ಲಿರುವ ವಿದ್ಯಾರ್ಥಿಗಳು ಆಟವಾಡಲು ಸ್ಥಳಗಳು ಇಲ್ಲದೆ ಮೊಬೈಲ್ ಮತ್ತು ಆನ್ಲೈನ್ ಆಟಗಳಲ್ಲಿ ಮಗ್ನರಾಗಿ ತಮ್ಮ ಭವಿಷ್ಯವನ್ನು ಹಾಳು ಮಾಡುವ ಪರಿಸ್ಥಿತಿಗೆ ಬಂದು ಮುಟ್ಟಿದ್ದಾರೆ. ನಮ್ಮ ಗ್ರಾಮದ ವ್ಯಾಪ್ತಿಯಲ್ಲಿ ಯಾವುದೇ ಆಟದ ಮೈದಾನಕ್ಕೆ ಶೀಘ್ರವಾಗಿ ಸ್ಥಳವನ್ನು ಪರಿಶೀಲಿಸಿ ಮಿಸಲಿಡಬೇಕು ಮತ್ತು ಆದಷ್ಟು ಬೇಗ ಗ್ರಾಮದ ವಿದ್ಯಾರ್ಥಿ, ಯುವಕರಿಗೆ ಅತ್ಯವಶ್ಯಕವಿರುವ ಆಟ ಮೈದಾನದ ನಿರ್ಮಾಣದ ಬಗ್ಗೆ ಕ್ರಮ ವಹಿಸಬೇಕು” ಎಂದು ಕ್ಯಾಂಪಸ್ ಫ್ರಂಟ್ ಕಿನ್ಯ ಘಟಕ ಅಧ್ಯಕ್ಷರಾದ ತಫ್ಸೀರ್ ಆಗ್ರಹಿಸಿದ್ದಾರೆ.

ಕ್ಯಾಂಪಸ್ ಫ್ರಂಟ್ ಕಿನ್ಯ ಘಟಕ ಈ ಕುರಿತು ಪಂಚಾಯತ್ ಅಭಿವೃದ್ಧಿ ಅಧಿಕಾರಿಗೆ ಮನವಿ ಸಲ್ಲಿಸಿದ್ದು, ಇದಕ್ಕೆ ಸ್ಪಂದಿಸಿದ ಅಧಿಕಾರಿಗಳು ಉನ್ನತ ಮಟ್ಟದ ಅಧಿಕಾರಿಗಳ ಗಮನಕ್ಕೆ ತಂದು ಶೀಘ್ರವಾಗಿ ಇದರ ವ್ಯವಸ್ಥೆಯನ್ನು ಮಾಡುವುದಾಗಿ ಭರವಸೆ ನೀಡಿದ್ದಾರೆ.

- Advertisement -

ಈ ಸಂದರ್ಭದಲ್ಲಿ ಕ್ಯಾಂಪಸ್ ಫ್ರಂಟ್ ಉಳ್ಳಾಲ ವಲಯಧ್ಯಕ್ಷರಾದ ಅರಫತ್, ಕಿನ್ಯ ಘಟಕ ಅಧ್ಯಕ್ಷ ತಫ್ಸೀರ್ ಮತ್ತು ಅಝ್ಮಾನ್ ಉಪಸ್ಥಿತರಿದ್ದರು.

Join Whatsapp