ಕಿನ್ನಿಗೋಳಿ: ಸೆ.17 ರಂದು ಬೃಹತ್ ರಕ್ತದಾನ ಶಿಬಿರ

Prasthutha|

ಕಿನ್ನಿಗೋಳಿ: ಖಿಲ್‌ರಿಯಾ ಜುಮ್ಮಾ ಮಸೀದಿ ಸುವರ್ಣ ಮಹೋತ್ಸವ ಪ್ರಯುಕ್ತ ಸುವರ್ಣ ಮಹೋತ್ಸವ ಸಮಿತಿ ಹಾಗೂ ಕೆಎಂಸಿ ಆಸ್ಪತ್ರೆ ಅತ್ತಾವರ ಸಹಯೋಗದಲ್ಲಿ ಸೆ.17ರ ಭಾನುವಾರದಂದು ಕೆಜೆಎಂ ಸಮುದಾಯ ಭವನ ಶಾಂತಿನಗರದಲ್ಲಿ ಬೃಹತ್‌ ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಗಿದೆ. ಆ ದಿನ ಪೂರ್ವಾಹ್ನ 9.30 ರಿಂದ ಮಧ್ಯಾಹ್ನ 1.30ರ ತನಕ ನಡೆಯಲಿದೆ.

- Advertisement -

ಶಿಬಿರದ ಉದ್ಘಾಟನೆಯನ್ನು ಖಿಲ್‌ರಿಯಾ ಜುಮ್ಮಾ ಮಸೀದಿ ಖತೀಬರು ಉಮರುಲ್‌ ಫಾರೂಕ್‌ ಸಖಾಫಿ ನೆರವೇರಿಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೆಜೆಎಂ ಅಧ್ಯಕ್ಷ ಜೆ.ಹೆಚ್. ಜಲೀಲ್‌ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಸುವರ್ಣ ಮಹೋತ್ಸವ ಸಮಿತಿ ಅಧ್ಯಕ್ಷ ಹಾಜಿ ಟಿಎಚ್‌ ಮಯ್ಯದ್ದಿ, ಲಯನ್ಸ್‌ ಕ್ಲಬ್‌ ಅಧ್ಯಕ್ಷೆ ಹಿಲ್ಡಾ ಡಿಸೋಜಾ, ರೋಟರಿ ಕ್ಲಬ್‌ ಅಧ್ಯಕ್ಷ ತ್ಯಾಗರಾಜ್‌, ಮೂಕಾಂಬಿಕಾ ದೇವಸ್ಥಾನ ಶಾಂತಿನಗರ ಧರ್ಮದರ್ಶಿ ವಿವೇಕಾನಂದ, ಮುಸ್ಲಿಂ ಒಕ್ಕೂಟ ಪ್ರಧಾನ ಕಾರ್ಯದರ್ಶಿ ಕೆ.ಎ. ಇಬ್ರಾಹಿಂ ಕಾರ್ನಾಡ್‌, ನೂರುಲ್‌ ಹುದಾ ಅಸೋಸಿಯೇಶನ್ ಅಧ್ಯಕ್ಷ ಎಂ. ಖಾದರ್‌ ಉಪಸ್ಥಿತರಿರಲಿದ್ದಾರೆ.