ಗ್ರಾಮದ ಸಾವಿರಕ್ಕೂ ಹೆಚ್ಚು ಮಂದಿಯ ವಿರುದ್ಧ FIR ದಾಖಲಿಸಿದ ಪೊಲೀಸರು!

Prasthutha|

ಕೋಲಾರ: ಪತಿ ತನ್ನ ಪತ್ನಿಯನ್ನು ಭೀಕರವಾಗಿ ಕೊಲೆಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ಗ್ರಾಮದ ಒಂದು ಸಾವಿರಕ್ಕೂ ಹೆಚ್ಚು ಜನರ ಮೇಲೆ ಪೊಲೀಸರು ಎಫ್‌ಐಆರ್‌ ದಾಖಲಿಸಿರುವ ಘಟನೆ ಕೋಲಾರದಲ್ಲಿ ನಡೆದಿದೆ. ಯಾರ ಹೆಸರನ್ನೂ ಉಲ್ಲೇಖಿಸದೆ ಈ ಎಫ್​ಐಆರ್‌ಗಳನ್ನು​ ದಾಖಲು ಮಾಡಲಾಗಿದೆ.

- Advertisement -

ಕೊಲೆಗೆ ಸಂಬಂಧಪಟ್ಟ ಆರೋಪಿ ನಾಗೇಶ್ ಎಂಬಾತ ಇದ್ದ ಹೊಟೆಲ್ ಮೇಲೆ ದಾಳಿ ನಡೆಸಿದ ಗ್ರಾಮಸ್ಥರು, ಆರೋಪಿ ನಾಗೇಶ್ ಕೊಲೆ ಮಾಡುವ ಉದ್ದೇಶದಿಂದ ಸಾವಿರಕ್ಕೂ ಹೆಚ್ಚು ಜನರು ಜಮಾಯಿಸಿದ್ದರು. ಈ ವೇಳೆ ಪೊಲೀಸರ ಕರ್ತವ್ಯಕ್ಕೆ ಅಡ್ಡಿ ಹಿನ್ನಲೆ ಪಿಎಸ್ ಐ ಈಶ್ವರಪ್ಪ ಎಂಬುವವರು ಸೆಕ್ಷನ್ 143, 147, 148, 307, 353, 149 ಅಡಿ ದೂರು ದಾಖಲು ಮಾಡಿದ್ದಾರೆ.


ನಂಬಿಹಳ್ಳಿ ಗ್ರಾಮದ ನಿವಾಸಿಯಾದ ಆರೋಪಿ ನಾಗೇಶ್ ಎಂಬಾತ, ತನ್ನ ಪತ್ನಿ ರಾಧಾಳನ್ನು ಕೊಲೆಗೈದು ಹೋಟೆಲ್ನಲ್ಲಿ ಅವಿತಿಕೊಂಡಿದ್ದ. ಈ ಹಿನ್ನಲೆ ಆತನನ್ನು ಹತ್ಯೆ ಮಾಡುವ ಉದ್ದೇಶದಿಂದಲೇ ಸಾವಿರಕ್ಕೂ ಹೆಚ್ಚು ಗ್ರಾಮಸ್ಥರು ಹೋಟೆಲ್ ಬಳಿ ಜಮಾಯಿಸಿದ್ದರು. ಈ ವಿಷಯ ತಿಳಿದು ಸ್ಥಳಕ್ಕೆ ಧಾವಿಸಿದ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಹಿನ್ನಲೆ ಪಿಎಸ್ಐ ಈಶ್ವರಪ್ಪ ಅವರು ವಿವಿಧ ಸೆಕ್ಷನ್ ಅಡಿ ದೂರು ದಾಖಲಿಸಿದ್ದರು. ಇದೀಗ ಬಂಧನ ಭೀತಿ ಹಿನ್ನಲೆ, ಗ್ರಾಮದ ಜನರು ತಲೆಮರೆಸಿಕೊಂಡಿದ್ದಾರೆ.