ಗುರ್ಗಾಂವ್: ಅತಿಕ್ರಮಿಸಿದ ಮಸೀದಿಗಳನ್ನು ಹಿಂದಿರುಗಿಸಲು ಇಮಾಮ್ ಶಹಝಾದ್ ಒತ್ತಾಯ

Prasthutha|

ನವದೆಹಲಿ: ಸ್ಥಾಪಿತ ಹಿತಾಸಕ್ತಿಗಳು ಗುರ್ಗಾಂವ್ ನಲ್ಲಿ ಅತಿಕ್ರಮಿಸಿದ ಮಸೀದಿ ಮತ್ತು ಧಾರ್ಮಿಕ ಕೇಂದ್ರಗಳನ್ನು ಮುಸ್ಲಿಮರಿಗೆ ಹಿಂದಿರುಗಿಸುವಂತೆ ಇಮಾಮ್ ಹಾಜಿ ಶಹಝಾದ್ ಖಾನ್ ಹರ್ಯಾಣ ಸರ್ಕಾರವನ್ನು ಒತ್ತಾಯಿಸಿದ್ದಾರೆ.

- Advertisement -

ಕಳೆದ ಶುಕ್ರವಾರ ನಮಾಝ್ ನಿರ್ವಹಣೆಗೆ ಮುಂದಾದ ಮುಸ್ಲಿಮರ ನೇತೃತ್ವ ವಹಿಸಿದ ನನ್ನ ಮೇಲೆ ಸಂಘಪರಿವಾರದ ಕಾರ್ಯಕರ್ತರು ಹಲ್ಲೆಗೆ ಯತ್ನಿಸಿದ್ದರು ಎಂದು ಅವರು ಆರೋಪಿಸಿದ್ದಾರೆ. ಆದರೆ ಈ ಬಗ್ಗೆ ಧೃತಿಗೆಡದೆ ನ್ಯಾಯದ ಪರ ಧ್ವನಿಯೆತ್ತುವುದಾಗಿ ಅವರು ತಿಳಿಸಿದರು.

ಹರ್ಯಾಣದಲ್ಲಿ ಎರಡು ತಿಂಗಳುಗಳಿಂದ ಸಂಘಪರಿವಾರ ಕಾರ್ಯಕರ್ತರು ನಿರಂತರ ಶುಕ್ರವಾರದ ನಮಾಝ್ ಗೆ ಅಡ್ಡಿಪಡಿಸುತ್ತಿದ್ದು, ಮುಸ್ಲಿಮ್ ವಿರೋಧಿ ಘೋಷಣೆ ಕೂಗುವುದರೊಂದಿಗೆ ಸಂಘರ್ಷದ ವಾತಾವರಣ ನಿರ್ಮಿಸಿದ್ದಾರೆ. ಕಳೆದ ಶುಕ್ರವಾರ ನಮಾಝ್ ನಿರ್ವಹಿಸಲು ಶಹಝಾದ್ ನೇತೃತ್ವದಲ್ಲಿ ಮುಸ್ಲಿಮರು ಅಣಿಯಾಗುತ್ತಿದ್ದಂತೆ ಸಂಘಪರಿವಾರ ಪ್ರಚೋದನಾಕಾರಿ ಘೋಷಣೆ ಕೂಗುತ್ತಾ ಮುಸ್ಲಿಮರನ್ನು ಗೇಲಿ ಮಾಡಿ ನಮಾಝ್ ಗೆ ಅಡ್ಡಿಪಡಿಸಿತ್ತು.

- Advertisement -

ಈ ಮಧ್ಯೆ ಸಂಘಪರಿವಾರದ ಬೆದರಿಕೆಗೆ ಕಿವಿಗೊಡದೆ ಗುರ್ಗಾಂವ್ ಮುಸ್ಲಿಮ್ ಏಕತಾ ಮಂಚ್ ನ ಅಧ್ಯಕ್ಷ ಶಹಝಾದ್ ಖಾನ್, ಸಂಘಪರಿವಾರವನ್ನು ಧೈರ್ಯವಾಗಿ ಎದುರಿಸಿ ನಮಾಝ್ ನಿರ್ವಹಿಸಿರುವುದು ಮಾಧ್ಯಮಗಳಲ್ಲಿ ವರದಿಯಾಗಿವೆ.

ಈ ಕುರಿತು ಸುದ್ದಿಗಾರರೊಂದಿಗೆ ಪ್ರತಿಕ್ರಿಯಿಸಿದ ಅವರು, ಕೇವಲ 2 ಶೇಕಡಾ ಇರುವ ಸಂಘಪರಿವಾರದ ಕಾರ್ಯಕರ್ತರು ಮಾತ್ರ ಗುರ್ಗಾಂವ್ ನಲ್ಲಿ ನಮಾಝ್ ನಿರ್ವಹಣೆಗೆ ಅಡ್ಡಿಪಡಿಸುತ್ತಿದ್ದು, ಉಳಿದ ಹಿಂದೂಗಳು ಸೌಹಾರ್ದತೆಯನ್ನು ಬಯಸುತ್ತಿದ್ದಾರೆ ಎಂದು ಅವರು ತಿಳಿಸಿದರು. ಗುರ್ಗಾಂವ್ ನಲ್ಲಿ ಅತಿಕ್ರಿಮಿಸಿಕೊಂಡ ಮಸೀದಿಗಳನ್ನು ಹಿಂದಿರುಗಿಸದರೆ ಮುಸ್ಲಿಮರು ಅಲ್ಲಿ ಯಾರಿಗೂ ತೊಂದರೆ ನೀಡದೆ ಶಾಂತಿಯುತವಾಗಿ ನಮಾಝ್ ನಿರ್ವಹಿಸುತ್ತಾರೆ ಎಂದು ತಿಳಿಸಿದರು.

ಸದ್ಯ ಸಂಘಪರಿವಾರದ ಕಾರ್ಯಕರ್ತರು ನಮಾಝ್ ಗೆ ಅಡ್ಡಿಪಡಿಸುತ್ತಿರುವುದರಿಂದ ಗುರ್ಗಾಂವ್ ನಲ್ಲಿ ಮುಸ್ಲಿಮರು ಭಯದ ವಾತಾವರಣದಲ್ಲಿ ಜೀವಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಮುಸ್ಲಿಮರ ಭದ್ರತೆಯನ್ನು ಖಚಿತಪಡಿಸಿಕೊಳ್ಳುವ ನಿಟ್ಟಿನಲ್ಲಿ ಸೂಕ್ತ ಕ್ರಮ ಜರುಗಿಸಬೇಕೆಂದು ಶಹಝಾದ್ ಖಾನ್ ಸರ್ಕಾರವನ್ನು ಒತ್ತಾಯಿಸಿದ್ದಾರೆ.



Join Whatsapp