ರ‍್ಯಾಲಿಯಲ್ಲಿ ಮಸೀದಿ ಧ್ವಂಸದ ಘೊಷಣೆ| ತಲಶ್ಶೇರಿಯ ನಾಲ್ವರು ಬಿಜೆಪಿ ಕಾರ್ಯಕರ್ತರ ಬಂಧನ

Prasthutha|

ತಿರುವನಂತಪುರಂ: ಕೇರಳದ ತಲಶ್ಶೇರಿಯಲ್ಲಿ ರ‍್ಯಾಲಿಯೊಂದರಲ್ಲಿ ಮಸೀದಿ ಧ್ವಂಸದ ಘೋಷಣೆಗಳನ್ನು ಕೂಗಿದ ನಾಲ್ವರು ಬಿಜೆಪಿ ಕಾರ್ಯಕರ್ತರನ್ನು ಬಂಧಿಸಲಾಗಿದೆ.

- Advertisement -

ಪಾಲಯಾಡ್ ನ ಶಿಜಿಲ್‌, ಕಣ್ಣವಂ ಮೂಲದ ಆರ್‌ ರಂಗಿತ್‌, ವಿವಿ ಶರತ್‌ ಮತ್ತು ಮಾಲೂರಿನ ಶ್ರೀರಾಗ್‌ ಬಂಧಿತರು. ಘಟನೆಯಲ್ಲಿ 15 ಜನ ಆರೋಪಿಗಳನ್ನು ಗುರುತಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಡಿ. 1ರಂದು ತಲಶ್ಶೇರಿಯಲ್ಲಿ ಬಿಜೆಪಿ ಹಾಗೂ ಯುವಮೋರ್ಚಾ ಆಯೋಜಿಸಿದ್ದ ಸಾರ್ವಜನಿಕ ರ‍್ಯಾಲಿಯಲ್ಲಿ ಕಾರ್ಯಕರ್ತರು ಪ್ರಚೋದನಾಕಾರಿ ಘೋಷಣೆಗಳನ್ನು ಕೂಗಿದ್ದರು. ಮುಸ್ಲಿಮರಿಗೆ ಪ್ರಾರ್ಥನೆ ನಡೆಸಲು ಮಸೀದಿಗಳು ಇರಲ್ಲ! ಆಝಾನ್ ಕೂಡಾ ಇಲ್ಲಿ ಕೇಳಲು ಸಾಧ್ಯವಿಲ್ಲ!! ಎಂದಾಗಿತ್ತು ರ‍್ಯಾಲಿಯಲ್ಲಿ ಕೇಳಿ ಬಂದ ಘೋಷಣೆ.

- Advertisement -

ಸುಮಾರು 25 ಬಿಜೆಪಿ ಕಾರ್ಯಕರ್ತರ ವಿರುದ್ಧ ಪ್ರಕರಣ ದಾಖಲಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ದೃಶ್ಯಾವಳಿಗಳ ಆಧಾರದ ಮೇಲೆ ಪೊಲೀಸರು ಪ್ರಕರಣವನ್ನು ಕೈಗೆತ್ತಿಕೊಂಡಿದ್ದಾರೆ. ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ 143, 147, 153 ಎ ಮತ್ತು 149 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

Join Whatsapp