ಉತ್ತರ ಕೊರಿಯಾ: ಸೋಮವಾರ ರಾತ್ರಿ ನಡೆದ ಮಿಲಿಟರಿ ಪರೇಡ್ ನಲ್ಲಿ ಉಗ್ರ ಭಾಷಣ ಮಾಡಿದ ಉತ್ತರ ಕೊರಿಯಾದ ನಾಯಕ ಕಿಮ್ ಜಾಂಗ್-ಉನ್ ದೇಶದ ಅಣ್ವಸ್ತ್ರಗಳನ್ನು ಹೆಚ್ಚಿಸುವುದಾಗಿ ಪ್ರತಿಜ್ಞೆ ಮಾಡಿದ್ದಾರೆ.
ಸಶಸ್ತ್ರ ಪಡೆಗಳ ಸಂಸ್ಥಾಪನಾ ವಾರ್ಷಿಕೋತ್ಸವದ ಅಂಗವಾಗಿ ನಡೆದ ಮೆರವಣಿಗೆಯಲ್ಲಿ ನಿಷೇಧಿತ ಮತ್ತು ಖಂಡಾಂತರ ಕ್ಷಿಪಣಿಗಳನ್ನು ಪ್ರದರ್ಶಿಸಿ ಮಾತಾಡಿದ ಅವರು “ನಮ್ಮ ದೇಶದ ಪರಮಾಣು ಸಾಮರ್ಥ್ಯಗಳನ್ನು ತ್ವರಿತ ಗತಿಯಲ್ಲಿ ಬಲಪಡಿಸಲು ಮತ್ತು ಅಭಿವೃದ್ಧಿಪಡಿಸಲು ನಾವು ಕ್ರಮಗಳನ್ನು ತೆಗೆದುಕೊಳ್ಳುವುದನ್ನು ಮುಂದುವರಿಸುತ್ತೇವೆ” ಎಂದು ಹೇಳಿದರು.
ಜೊತೆಗೆ ಪರಮಾಣು ಪಡೆಗಳು ಯಾವಾಗ ಬೇಕಾದರೂ ಚಲಾಯಿಸಲು ಸಿದ್ಧವಾಗಿರಬೇಕು ಎಂದು ಕಿಮ್ ಜಾಂಗ್-ಉನ್ ಹೇಳಿರುವುದಾಗಿ ಕೊರಿಯನ್ ಸೆಂಟ್ರಲ್ ನ್ಯೂಸ್ ಏಜೆನ್ಸಿ (ಕೆಸಿಎನ್ಎ) ಅಧಿಕೃತವಾಗಿ ವರದಿ ಮಾಡಿದೆ.
2017 ರ ನಂತರ ಮೊದಲ ಬಾರಿಗೆ ಮಾರ್ಚ್ ನಲ್ಲಿ, ಉತ್ತರ ಕೊರಿಯಾವು ತನ್ನ ಅತಿದೊಡ್ಡ ಐಸಿಬಿಎಂ ಅನ್ನು ಪರೀಕ್ಷಿಸಿತ್ತು. ಇವರ ಅಂದಿನ ನಡೆಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ವ್ಯಾಪಕ ಖಂಡನೆಗೆ ಕಾರಣವಾಗಿತ್ತಾದರೂ ಕಿಮ್ ಇಲ್ಲಿಯವರೆಗೆ ಆ ಖಂಡನೆಯಿಂದ ವಿಚಲಿತರಾಗಲಿಲ್ಲ ಎನ್ನಲಾಗಿದೆ