ಉತ್ತರ ಕೊರಿಯಾದಲ್ಲಿ ಆಹಾರದ ಕೊರತೆಯಾಗುವ ಸಾಧ್ಯತೆಯಿದೆ : ಕಿಮ್ ಜೋಂಗ್ ಉನ್ ಎಚ್ಚರಿಕೆ

Prasthutha|

ಸೋಲ್‌: ಕೋವಿಡ್‌ ಬಿಕ್ಕಟ್ಟು, ಚಂಡಮಾರುತ ಮತ್ತು ಪ್ರವಾಹದಿಂದಾಗಿ ದೇಶದಲ್ಲಿ ಆಹಾರ ಕೊರತೆಯಾಗುವ ಸಾಧ್ಯತೆ ಇದೆ ಉತ್ತರ ಕೊರಿಯಾ ಅಧ್ಯಕ್ಷ ಕಿಮ್ ಜೋಂಗ್ ಉನ್ ಎಚ್ಚರಿಕೆ ನೀಡಿದ್ದಾರೆ.

- Advertisement -

ಉತ್ತರ ಕೊರಿಯಾ ಆಡಳಿತಾರೂಢ ವರ್ಕರ್ಸ್‌ ಪಾರ್ಟಿ ಆಫ್‌ ಕೊರಿಯಾದ ಕೇಂದ್ರೀಯ ಸಮಿತಿ ಸಭೆಯಲ್ಲಿ ಮಾತನಾಡಿರುವ ಕಿಮ್‌, ‘ಈ ವರ್ಷ ಆರ್ಥಿಕತೆ ಸುಧಾರಿಸಿತ್ತು. ಆದರೆ, ಹಲವಾರು ಸವಾಲುಗಳನ್ನು ಎದುರಿಸಬೇಕಾಗಿದೆ. ಕೃಷಿ ವಲಯ ಸಂಪೂರ್ಣ ವಿಫಲವಾಗಿದೆ. ಕಳೆದ ವರ್ಷದ ಚಂಡಮಾರುತದಿಂದ ನಿರೀಕ್ಷಿಸಿದಂತೆ ಆಹಾರ ಧಾನ್ಯಗಳ ಉತ್ಪಾದನೆಯಾಗಿಲ್ಲ’ ಎಂದು ಹೇಳಿದ್ದಾರೆ.

ಕೋವಿಡ್ ಸೋಂಕಿನ ಕಾರಣದಿಂದ ದೇಶದ ಗಡಿಗಳನ್ನು ಮುಚ್ಚಿದ್ದರಿಂದ ಉತ್ತರ ಕೊರಿಯಾದ ಆರ್ಥಿಕತೆಯು ಮತ್ತಷ್ಟು ಕ್ಷೀಣಿಸಿದೆ. ಇದು ಚೀನಾದೊಂದಿಗಿನ ವ್ಯಾಪಾರವನ್ನು ಸ್ಥಗಿತಗೊಳಿಸಿದೆ. ಜತೆಗೆ, ಕಳೆದ ಬೇಸಿಗೆಯಲ್ಲಿ ವಿನಾಶಕಾರಿ ಚಂಡಮಾರುತ ಮತ್ತು ಪ್ರವಾಹಗಳು ಬೆಳೆಗಳನ್ನು ನಾಶಪಡಿಸಿವೆ.

Join Whatsapp