ಇಂದಿನಿಂದ ಇಂಡಿಯನ್‌ ಸೂಪರ್‌ ಲೀಗ್‌ ಫುಟ್‌ಬಾಲ್‌ ಟೂರ್ನಿ

Prasthutha|

ಕೊಚ್ಚಿ: ಇಂಡಿಯನ್ ಸೂಪರ್ ಲೀಗ್ (ಐಎಸ್ಎಲ್) ಟೂರ್ನಿಯ 9ನೇ ಆವೃತ್ತಿಗೆ ಶುಕ್ರವಾರ ಕೇರಳದ ಕೊಚ್ಚಿಯಲ್ಲಿ ಚಾಲನೆ ದೊರೆಯಲಿದೆ. ಜವಾಹರ ಲಾಲ್ ನೆಹರು ಸ್ಟೇಡಿಯಂನಲ್ಲಿ ನಡೆಯಲಿರುವ ಉದ್ಘಾಟನಾ ಪಂದ್ಯದಲ್ಲಿ ಕಳೆದ ಆವೃತ್ತಿಯ ರನ್ನರ್ ಅಪ್ ಕೇರಳ ಬ್ಲಾಸ್ಟರ್ಸ್ ತಂಡ ಈಸ್ಟ್ ಬೆಂಗಾಲ್ ಎಫ್‌ಸಿಯನ್ನು ಎದುರಿಸಲಿದೆ.

- Advertisement -

2022- 23ರ ಆವೃತ್ತಿಯಲ್ಲಿ ಒಟ್ಟು 117 ಪಂದ್ಯಗಳು ನಡೆಯಲಿವೆ. ದೇಶಾದ್ಯಂತ ಒಟ್ಟು ಹತ್ತು ಮೈದಾನಗಳಲ್ಲಿ, ಸುಮಾರು ಐದು ತಿಂಗಳ ಕಾಲ ಲೀಗ್‌ ಹಂತದ ಪಂದ್ಯಗಳು ನಡೆಯಲಿವೆ. ಲೀಗ್ ಹಂತವು ಫೆಬ್ರವರಿ 26ರಂದು ಮುಕ್ತಾಯಗೊಳ್ಳಲಿದ್ದು, ಆ ಬಳಿಕ ಪ್ಲೇಆಫ್‌, ಸೆಮಿ ಫೈನಲ್‌ ಹಾಗೂ ಫೈನಲ್‌ ನಡೆಯಲಿದೆ. ಲೀಗ್ ಹಂತದಲ್ಲಿ ಮೊದಲ ಎರಡು ಸ್ಥಾನಗಳನ್ನು ಪಡೆಯುವ ತಂಡಗಳು ನೇರವಾಗಿ ಸೆಮಿಫೈನಲ್ ಪ್ರವೇಶಿಸಲಿವೆ. ಸೆಮಿ ಪ್ರವೇಶಿಸುವ ಇನ್ನೆರಡು ತಂಡಗಳನ್ನು ನಿರ್ಧರಿಸಲು ಅಂಕ ಪಟ್ಟಿಯಲ್ಲಿ 3 ರಿಂದ 6ರವರೆಗಿನ ಸ್ಥಾನಗಳನ್ನು ಪಡೆಯುವ ತಂಡಗಳ ನಡುವೆ ಪ್ಲೇ ಆಫ್ ಆಯೋಜಿಸಲಾಗುತ್ತದೆ.

ಟೂರ್ನಿಯಲ್ಲಿ ಒಟ್ಟು 11 ತಂಡಗಳು ಭಾಗವಹಿಸಲಿದ್ದು, ಪ್ರತಿ ತಂಡ ಲೀಗ್ ಹಂತದಲ್ಲಿ ‘ಹೋಮ್‌ –ಅವೇ’ ಮಾದರಿಯಲ್ಲಿ 20 ಪಂದ್ಯಗಳನ್ನು ಆಡಲಿದೆ ಎಲ್ಲಾ ತಂಡಗಳು ತವರು ಅಂಗಳ ಮತ್ತು  ಎದುರಾಳಿಗಳ ಅಂಗಳದಲ್ಲಿ ಪಂದ್ಯಗಳನ್ನಾಡಲಿವೆ.

- Advertisement -

ಕೋವಿಡ್‌ ಕಾರಣದಿಂದಾಗಿ ಕಳೆದ ಎರಡು ಆವೃತ್ತಿಗಳಲ್ಲಿ ಪ್ಷೇಕ್ಷಕರಿಗೆ ಮೈದಾನಕ್ಕೆ ಪ್ರವೇಶ ನಿರಾಕರಿಸಲಾಗಿತ್ತು. ಆದರೆ ಈ ಬಾರಿ ಯಾವುದೇ ನಿರ್ಬಂಧಗಳಿಲ್ಲದೆ, ಗ್ಯಾಲರಿಯ ಪೂರ್ಣ ಸಾಮರ್ಥ್ಯದೊಂದಿಗೆ ಪಂದ್ಯಗಳು ನಡೆಯಲಿವೆ. ಅಂತಾರಾಷ್ಟ್ರೀಯ ಪ್ರಮುಖ ಲೀಗ್‌ಗಳ ಮಾದರಿಯಲ್ಲಿ ಪ್ರತಿ ಗುರುವಾರದಿಂದ ಭಾನುವಾರದವರೆಗೆ ಪಂದ್ಯಗಳು ನಡೆಯಲಿವೆ.

Join Whatsapp