ಖದೀರ್ ಕಸ್ಟಡಿ ಸಾವು ಪ್ರಕರಣ: ಸುಮೋಟೋ ಪ್ರಕರಣ ದಾಖಲಿಸಿಕೊಂಡ ತೆಲಂಗಾಣ ಹೈಕೋರ್ಟ್

Prasthutha|

ಅಹ್ಮದಾಬಾದ್; ಮೇಡಕ್ ಜಿಲ್ಲೆಯಲ್ಲಿ ಸರಗಳ್ಳತನದ ಆಪಾದನೆ ಮೇಲೆ ಪೊಲೀಸರು ಬಂಧಿಸಿದ 35ರ ಪ್ರಾಯದ ಮುಹಮ್ಮದ್ ಖದೀರ್ ಕಸ್ಟಡಿ ಸಾವಿನ ಬಗ್ಗೆ ತೆಲಂಗಾಣ ಹೈಕೋರ್ಟ್ ಸ್ವಯಂ ಮೊಕದ್ದಮೆ ಕೈಗೆತ್ತಿಕೊಂಡಿದೆ.

- Advertisement -


ಮುಖ್ಯ ನ್ಯಾಯಾಧೀಶರಾದ ಉಜ್ಜಾಲ್ ಭುಯಾನ್ ಹಾಗೂ ಜಸ್ಟಿಸ್ ಎನ್. ತುಕಾರಾಮ್ಜಿ ಇರುವ ಪೀಠವು ಪ್ರಕರಣ ಗಮನಿಸುತ್ತದೆ.
ಇಂಡಿಯನ್ ಎಕ್ಸ್ ಪ್ರೆಸ್ ದಿನಪತ್ರಿಕೆಯಲ್ಲಿ ಬಂದ ವರದಿಯ ಆಧಾರದ ಮೇಲೆ ತೆಲಂಗಾಣ ಹೈಕೋರ್ಟ್ ಪ್ರಕರಣವನ್ನು ತೆಗೆದುಕೊಂಡಿದೆ. ಜನವರಿ 27ರಂದು ಮೇಡಕ್ ಪೊಲೀಸರು ಖಾದೀರ್ ಅವರನ್ನು ವಶಕ್ಕೆ ಪಡೆದು ಕರೆದೊಯ್ದಿದ್ದರು. ಕಾನೂನು ರೀತಿ ಖದೀರ್ ಬಂಧನವಾಗಿಲ್ಲ ಹಾಗೂ ಕಾನೂನು ಬಾಹಿರವಾಗಿ ಅಮಾನವೀಯ ರೀತಿಯಲ್ಲಿ ಅವರ ವಿಚಾರಣೆ ನಡೆಸಲಾಗಿದೆ.
ಫೆಬ್ರವರಿ 9ರಂದು ಖದೀರ್ ಸ್ಥಳೀಯ ಆಸ್ಪತ್ರೆಗೆ ದಾಖಲಾಗಿದ್ದಾರೆ. ಪೊಲೀಸರ ಚಿತ್ರಹಿಂಸೆಗೆ ಒಳಗಾಗಿದ್ದ ಅವರು ಫೆಬ್ರವರಿ 16ರಂದು ಹೈದರಾಬಾದಿನ ಗಾಂಧಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ದೇಹವನ್ನು ಊರಿಗೆ ತಂದು ದಪನ ಮಾಡಲಾಗಿದೆ.


ಕೋರ್ಟ್ ಫೆಬ್ರವರಿ 21ರ ಸೋಮವಾರ ಇದರ ವಿಚಾರಣೆ ಕೈಗೆತ್ತಿಕೊಂಡಿದೆ. ಪೊಲೀಸರ ವಿರುದ್ಧ ಕ್ರಮ ಅಗತ್ಯವೇ ಎನ್ನುವುದನ್ನು ನಿರ್ಣಯ ಮಾಡಲಿದೆ.
ಮೊಕದ್ದಮೆಯಲ್ಲಿ ರಾಜ್ಯದ ಮುಖ್ಯ ಕಾರ್ಯದರ್ಶಿ, ಗೃಹ ಇಲಾಖೆಯ ಮುಖ್ಯ ಕಾರ್ಯದರ್ಶಿ, ತೆಲಂಗಾಣದ ಡೈರೆಕ್ಟರ್ ಜನರಲ್ ಆಫ್ ಪೊಲೀಸ್, ಮೇಡಕ್ ಜಿಲ್ಲೆಯ ಸೂಪರಿನ್ ಟೆಂಡೆಂಟ್ ಆಫ್ ಪೊಲೀಸ್, ಮೇಡಕ್ ಪೊಲೀಸ್ ಠಾಣಾಧಿಕಾರಿಗಳನ್ನು ಜವಾಬ್ದಾರರನ್ನಾಗಿ ಮಾಡಲಾಗಿದೆ.



Join Whatsapp