ಸುರತ್ಕಲ್ ಕಾಂಗ್ರೆಸ್ ಟಿಕೆಟ್: ‘ಪ್ರಸ್ತುತ ನ್ಯೂಸ್’ ಹೆಸರಲ್ಲಿ ಅಪಪ್ರಚಾರ

Prasthutha|

ಮಂಗಳೂರು: ಮಂಗಳೂರು ಉತ್ತರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಆಯ್ಕೆ ವಿಚಾರವಾಗಿ ಪ್ರಸ್ತುತ ನ್ಯೂಸ್ ಹೆಸರನ್ನು ಬಳಸಿಕೊಂಡು ಅಪಪ್ರಚಾರ ನಡೆಸುತ್ತಿರುವುದು ನಮ್ಮ ಗಮನಕ್ಕೆ ಬಂದಿರುತ್ತದೆ. ಪ್ರಸ್ತುತ ನ್ಯೂಸ್ ಯೂಟ್ಯೂಬ್ ನಲ್ಲಿ ಸುದ್ದಿ ಪ್ರಸಾರವಾದ ರೀತಿಯಲ್ಲಿ ಪ್ರಸ್ತುತ ನ್ಯೂಸ್ ಅನ್ನು ನಕಲಿಸಿ ಸುದ್ದಿಗಳನ್ನು ತೇಲಿ ಬಿಡಲಾಗುತ್ತಿದೆ. ಕಾಂಗ್ರೆಸ್ ನಾಯಕರ ಸಂಧಾನ ವಿಫಲವಾಗಿದೆ, ಮೊಯ್ದಿನ್ ಬಾವಾ ಪರವಾಗಿ ಒಲವು ಹೆಚ್ಚಾಗಿದೆ, ಇನಾಯತ್ ಅಲಿ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸುವ ಸೂಚನೆ ಇದೆ ಎಂಬ ಬ್ರೇಕಿಂಗ್ ನ್ಯೂಸ್ ಮಾದರಿಯ ಸುದ್ದಿಯು ಪ್ರಸ್ತುತ ನ್ಯೂಸ್ ಯೂಟ್ಯೂಬ್ ಚಾನೆಲ್ ನಲ್ಲಿ ಪ್ರಸಾರವಾದ ಥರ ಬಿಂಬಿಸಲಾಗುತ್ತಿದೆ.

- Advertisement -


ನಾವು ತಿಳಿಯಪಡಿಸುವುದೇನೆಂದರೆ ನಮ್ಮಲ್ಲಿ ಈ ಸುದ್ದಿ ಪ್ರಸಾರವಾಗಿಲ್ಲ ಮತ್ತು ಈ ಅಪಪ್ರಚಾರಕ್ಕೂ ಪ್ರಸ್ತುತ ನ್ಯೂಸ್ ಗೂ ಯಾವುದೇ ಸಂಬಂಧ ಇರುವುದಿಲ್ಲ. ಪ್ರಸ್ತುತ ನ್ಯೂಸ್ ವಾಹಿನಿಯ ಹೆಸರನ್ನು ಕೆಡಿಸಲು ಈ ರೀತಿಯ ಷಡ್ಯಂತ್ರ ನಡೆಸಲಾಗುತ್ತಿದೆ ಎಂಬ ಶಂಕೆ ನಮಗಿದೆ. ನಮ್ಮ ಹೆಸರನ್ನು ಬಳಸಿ ಅಪಪ್ರಚಾರ ನಡೆಸುತ್ತಿರುವವರ ವಿರುದ್ಧ ನಾವು ದೂರು ಸಲ್ಲಿಸಲು ಪ್ರಸ್ತುತ ನ್ಯೂಸ್ ಸಂಪಾದಕರು ಚಿಂತನೆ ನಡೆಸಿದ್ದಾರೆ.

Join Whatsapp