ಕೇರಳದ ಸಾಕ್ಷರತಾ ‘ರಾಯಭಾರಿ’: ಶತಾಯುಷಿ ಕಾರ್ತ್ಯಾಯನಿ ಅಮ್ಮ ಇನ್ನಿಲ್ಲ

Prasthutha|

ತಿರುವನಂತಪುರಂ (ಕೇರಳ) : ದೇಶದ ಅತೀ ಹಿರಿಯ ಸಾಕ್ಷರತಾ ವಿದ್ಯಾರ್ಥಿನಿ, ನಾರಿಶಕ್ತಿ ಪ್ರಶಸ್ತಿ ವಿಜೇತೆಯಾಗಿದ್ದ ಕೇರಳದ ಕಾರ್ತ್ಯಾಯಿನಿ ಅಮ್ಮ ನಿಧನರಾಗಿದ್ದಾರೆ. ಕೇರಳದ ಆಲಪ್ಪುಝ ಜಿಲ್ಲೆಯ ಹರಿಪಾಡ್ ಮುತ್ತುಲ್ಲದ ತಮ್ಮ ಸ್ವಗೃಹದಲ್ಲಿ ನಿಧನರಾದರು.

- Advertisement -


96ನೇ ವಯಸ್ಸಿನಲ್ಲಿ ಕೇರಳದ ಸಾಕ್ಷರತಾ ಪರೀಕ್ಷೆಯಲ್ಲಿ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದ, ನಾರಿಶಕ್ತಿ ಪುರಸ್ಕೃತ ಕಾರ್ತ್ಯಾಯನಿ ಅಮ್ಮ ನಿಧನರಾಗಿದ್ದಾರೆ. ಇವರಿಗೆ 101 ವರ್ಷ ವಯಸ್ಸಾಗಿತ್ತು.


ಕಾರ್ತ್ಯಾಯನಿ ಅಮ್ಮ ಆಳಪ್ಪುಳ ಜಿಲ್ಲೆಯ ಚೆಪ್ಪಾಡ್ನ ಮಟ್ಟಂನಲ್ಲಿ ಜನಿಸಿದರು. ಮೊದಲಿನಿಂದಲೂ ಓದಿನ ಬಗ್ಗೆ ಅಪಾರ ಆಸಕ್ತಿ ಹೊಂದಿದ್ದರು. ಈ ಹಿನ್ನಲೆ ತಮ್ಮ ಮಗಳಿಂದ ಪ್ರೇರಣೆ ಪಡೆದ ಅವರು ತಮ್ಮ 96ನೇ ವಯಸ್ಸಿನಲ್ಲಿ ಕೇರಳ ಸರ್ಕಾರದ ಅಕ್ಷರ ಲಕ್ಷಂ ಯೋಜನೆಯಲ್ಲಿ ಸಾಕ್ಷರತಾ ಪರೀಕ್ಷೆಯನ್ನು ಬರೆದರು. ಸುಮಾರು 40 ಸಾವಿರ ಅಭ್ಯರ್ಥಿಗಳು ಈ ಪರೀಕ್ಷೆಯನ್ನು ಬರೆದಿದ್ದರು. ಇದರಲ್ಲಿ ಶೇ. 98 ಅಂಕಗಳನ್ನು ಪಡೆಯುವ ಕಾರ್ತ್ಯಾಯನಿ ಅಮ್ಮ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದರು. ಬಳಿಕ ಕಾರ್ತ್ಯಾಯಿನಿ ಅಮ್ಮ ದೇಶಾದ್ಯಂತ ಪ್ರಸಿದ್ಧಿ ಪಡೆದರು.

Join Whatsapp