ಬಿಜೆಪಿ ಜೊತೆ ಮೈತ್ರಿಗೆ ವಿರೋಧವಿಲ್ಲ, ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಪಕ್ಷ ಬಿಡುವುದಿಲ್ಲ: ಜಿಟಿ ದೇವೇಗೌಡ

Prasthutha|

ವಿಜಯಪುರ: ಬಿಜೆಪಿ ಜತೆ ಮೈತ್ರಿ ಮಾಡಿಕೊಳ್ಳಲು ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ವಿರೋಧವಿಲ್ಲ. ಅವರು ಪಕ್ಷ ಬಿಡುವುದಿಲ್ಲ ಎಂದು ಜೆಡಿಎಸ್ ಶಾಸಕ ಜಿ.ಟಿ.ದೇವೇಗೌಡ ಹೇಳಿದ್ದಾರೆ.

- Advertisement -


ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಜೆಡಿಎಸ್ ವರಿಷ್ಠ ದೇವೇಗೌಡರ ಜೊತೆ ಇಬ್ರಾಹಿಂ ಮಾತನಾಡಿದ್ದಾರೆ. ಬಿಜೆಪಿ ಜತೆ ಮೈತ್ರಿಗೆ ವಿರೋಧವಿಲ್ಲ. ಹೇಗೆ ಒಟ್ಟಾಗಿ ಹೋಗಬೇಕು ಅನ್ನೋದು ಸಿ.ಎಂ.ಇಬ್ರಾಹಿಂ ಸಲಹೆ ನೀಡಿದ್ದಾರೆ ಎಂದು ಹೇಳಿದ್ದಾರೆ.


ಅವರೇ ಮುಂದೆ ನಿಂತು ನನ್ನ ಅಧ್ಯಕ್ಷ ಸ್ಥಾನ ಅನೌನ್ಸ್ ಮಾಡಿದ್ದಾರೆ, ನೀವೆ ನೋಡಿದ್ದೀರಿ. ಬಿಜೆಪಿ ಜೊತೆಗೆ ಎಷ್ಟು ಸೀಟ್ ಹಂಚಿಕೆಯಾಗಬೇಕು. ಮುಂದೆ ಯಾವ ರೀತಿ ನಡೆದುಕೊಳ್ಳಬೇಕು ಎನ್ನುವ ಸಲಹೆ ಇಬ್ರಾಹಿಂರದ್ದು ಎಂದಿದ್ದಾರೆ.