ತಿರುವನಂತಪುರಂ: ದೇಶದ ಆರೋಗ್ಯ ಸಾಧನೆಗಳ ಪೈಕಿ ಕೇರಳ ರಾಜ್ಯ ಅಗ್ರ ಶ್ರೇಯಾಂಕವನ್ನು ಪಡೆದಿದ್ದು, ಉತ್ತರ ಪ್ರದೇಶದ ಸಾಧನೆ ಅತ್ಯಂತ ಕೆಟ್ಟದಾಗಿದೆ ಎಂದು ನೀತಿ ಆಯೋಗ ಬಿಡುಗಡೆಗೊಳಿಸಿದ ಸೂಚ್ಯಂಕದಿಂದ ಬಹಿರಂಗಗೊಂಡಿದೆ.
ನಾಲ್ಕನೇ ಸುತ್ತಿನ ಆರೋಗ್ಯ ಸೂಚ್ಯಂಕವು 2019 – 2020 ಅವಧಿಯನ್ನು ಗಣನೆಯ ಆಧಾರದಲ್ಲಿ ಈ ವರದಿ ಬಹಿರಂಗವಾಗಿದೆ.
ಆರೋಗ್ಯ ಮಾನದಂಡಗಳಲ್ಲಿ ತಮಿಳುನಾಡು ಮತ್ತು ತೆಲಂಗಾಣ ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನವನ್ನು ಪಡೆದು ಗಮನ ಸೆಳೆದಿದೆ.
ವಿಶ್ವಬ್ಯಾಂಕ್ ನ ತಾಂತ್ರಿಕ ನೆರವಿನೊಂದಿಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಸಹಯೋಗದೊಂದಿಗೆ ಈ ವರದಿಯನ್ನು ಸಿದ್ಧಪಡಿಸಲಾಗಿದೆ.