ಕೇರಳ: ರಾಮಾಯಣ ರಸಪ್ರಶ್ನೆ ಸ್ಪರ್ಧೆ; ವಿಜೇತರಾದ ಮುಸ್ಲಿಂ ವಿದ್ಯಾರ್ಥಿಗಳು

Prasthutha|

ತಿರುವನಂತಪುರಂ: ರಾಜ್ಯ ಮಟ್ಟದ ರಾಮಾಯಣ ರಸಪ್ರಶ್ನೆಯಲ್ಲಿ ಇಸ್ಲಾಮಿಕ್ ಅಧ್ಯಯನ ನಡೆಸುತ್ತಿರುವ ವಿದ್ಯಾರ್ಥಿಗಳಾದ ಮುಹಮ್ಮದ್ ಬಾಸಿತ್‌ ಎಂ. ಮತ್ತು ಮುಹಮ್ಮದ್ ಜಾಬಿರ್ ಪಿ.ಕೆ. ವಿಜೇತರಾಗಿದ್ದಾರೆ.

- Advertisement -


ಜುಲೈ 23 ರಿಂದ 25 ರ ವರೆಗೆ ಕೇರಳದ ಪ್ರಕಾಶನ ಸಂಸ್ಥೆ ಡಿ.ಸಿ. ಬುಕ್ಸ್ ಆಯೋಜಿಸಿದ್ದ ಆನ್‌ಲೈನ್ ರಸಪ್ರಶ್ನೆ ಸ್ಪರ್ಧೆಯಲ್ಲಿ ರಾಮಾಯಣವನ್ನು ಅಧ್ಯಯನ ಮಾಡಿದ್ದ ಈ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಇವರು ಮಲಪ್ಪುರಂ ಜಿಲ್ಲೆಯ ವಲಾಂಚೇರಿಯ ಮರ್ಕಝ್ ಕೆ.ಕೆ.ಎಚ್‌.ಎಂ. ಇಸ್ಲಾಮಿಕ್ ಮತ್ತು ಆರ್ಟ್ಸ್ ಕಾಲೇಜಿನ (ವಾಫಿ) ಇಸ್ಲಾಮಿಕ್ ಅಧ್ಯಯನ ಕೋರ್ಸ್‌ ನ ವಿದ್ಯಾರ್ಥಿಗಳಾಗಿದ್ದಾರೆ.


ನಮ್ಮ ಕಾಲೇಜಿನ ಗ್ರಂಥಾಲಯವು ಎಲ್ಲಾ ಧಾರ್ಮಿಕ ಪುಸ್ತಕಗಳನ್ನು ಹೊಂದಿದೆ. ಹಾಗಾಗಿ ಧರ್ಮಗಳ ಪುಸ್ತಕಗಳನ್ನು ನೇರವಾಗಿ ಓದಿ ಅರ್ಥ ಮಾಡಿಕೊಳ್ಳಬಹುದು.ನಮ್ಮಲ್ಲಿ ಹೆಚ್ಚಿನವರು ತಮ್ಮ ಅಧ್ಯಯನದ ಭಾಗವಾಗಿ ಧರ್ಮಗಳ ಬಗ್ಗೆ ಕಲಿಯುತ್ತಾರೆ ಎಂದು ಹಿರಿಯ ವಿದ್ಯಾರ್ಥಿ ಜಾಬಿರ್ ಹೇಳಿದರು.

- Advertisement -


ಮಕ್ಕಳ ನಿಯತಕಾಲಿಕಗಳಲ್ಲಿ ಪ್ರಕಟವಾಗುವ ರಾಮಾಯಣ ಚಿತ್ರಕಥೆಗಳು ಮತ್ತು ಸಣ್ಣ ಕಥೆಗಳನ್ನು ಓದಿದ ಕಾರಣದಿಂದ ಬಾಲ್ಯದಿಂದಲೂ ರಾಮಾಯಣವನ್ನು ಕಲಿಯಲು ಆಸಕ್ತಿ ಹೊಂದಿದ್ದಾಗಿ ಮತ್ತೊಬ್ಬ ವಿದ್ಯಾರ್ಥಿ ಬಾಸಿತ್ ಹೇಳಿದರು.

Join Whatsapp