ಚಿಕ್ಕಮಗಳೂರು: ಮಳೆ ಅವಾಂತರ; ಒಂದೇ ದಿನದಲ್ಲಿ ಎರಡು ಅಪಘಾತ

Prasthutha|

ಚಿಕ್ಕಮಗಳೂರು:  ಜಿಲ್ಲೆಯಲ್ಲಿ ಕಳೆದ ರಾತ್ರಿಯಿಂದ ಮಳೆಯ ಅಬ್ಬರ ಜೋರಾಗಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ.

- Advertisement -

ಭಾರೀ ಮಳೆಯಿಂದ ವಾಹನಗಳನ್ನ ಓಡಿಸಲು ಸವಾರರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಇಂದು ಒಂದೇ ದಿನ ಕಾಫಿನಾಡಲ್ಲಿ ಎರಡು ಅಪಘಾತಗಳು ಸಂಭವಿಸಿವೆ.

ಮೂಡಿಗೆರೆ ತಾಲೂಕಿನ ಬಣಕಲ್ ಸಮೀಪದ ನಝರತ್ ಶಾಲೆ ಬಳಿ ಚಾಲಕನ ನಿಯಂತ್ರಣ ತಪ್ಪಿ 800 ಕಾರು ಚರಂಡಿಗೆ ಉರುಳಿ ಬಿದ್ದಿದ್ದು ಕಾರಿನಲ್ಲಿದ್ದವರಿಗೆ ಸಣ್ಣ ಪುಟ್ಟ ಗಾಯಗಳಗಿವೆ.

- Advertisement -

ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ  ಹೆಬ್ಬರಿಗೆ ಸಮೀಪ ಕಾರು-ಗೂಡ್ಸ್ ವಾಹನ‌ಮುಖಾಮುಖಿ ಡಿಕ್ಕಿಯಾಗಿದ್ದು.ಕಾರಿನಲಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಡಿಕ್ಕಿ ಹೊಡೆದ ರಭಸಕ್ಕೆ ಕಾರು ಗದ್ದೆಗೆ ಹಾಕಿದ ತಂತಿ ಬೆಲಿಗೆ ಸಿಕ್ಕಿಹಾಕಿಕೊಂಡು ಕಾರಿನ ಹಿಂಭಾಗ ಜಖಂ ಆಗಿದೆ.

ಕಾಫಿನಾಡಿನಾದ್ಯಂತ ಭಾರೀ ಮಳೆಗೆ ಸರಣಿ ಅಪಘಾತಗಳು ಸಂಭವಿಸುತ್ತಿದ್ದು ವಾಹನ ಸವಾರರು ರಸ್ತೆಯಲ್ಲಿ ಸಂಚರಿಸಲು ಆತಂಕ ಪಡುವ ಸ್ಥಿತಿ ನಿರ್ಮಾಣವಾಗಿದೆ.

Join Whatsapp