ಕೇರಳ ಚುನಾವಣೆ | ಪಂದಳಂ ಪುರಸಭೆಯಲ್ಲಿ ಬಿಜೆಪಿ ನೇತೃತ್ವದ ಎನ್ ಡಿಎಗೆ ಭರ್ಜರಿ ಗೆಲುವು

Prasthutha|

ತಿರುವನಂತಪುರಂ : ಕೇರಳದಲ್ಲಿ ಸ್ಥಳೀಯ ಸಂಸ್ಥೆ ಚುನಾವಣೆ ಫಲಿತಾಂಶವು ಪ್ರಕಟವಾಗುತ್ತಿದ್ದು, ಶಬರಿಮಲೆ ದೇವಸ್ಥಾನ ನಿರ್ವಹಣೆ ಹೊತ್ತಿರುವ ರಾಜಮನೆತನದ ನೆಲೆಯಾದ ಪಂದಳಂನಲ್ಲಿ ಬಿಜೆಪಿ ಭರ್ಜರಿ ವಿಜಯ ಸಾಧಿಸಿದೆ.

- Advertisement -

ಎಲ್ ಡಿಎಫ್ ವಶದಲ್ಲಿದ್ದ ಪಂದಳಂ ಮುನ್ಸಿಪಾಲಿಟಿಯಲ್ಲಿ ಬಿಜೆಪಿ ನೇತೃತ್ವದ ಎನ್ ಡಿಎ 17 ಸ್ಥಾನಗಳಲ್ಲಿ ಗೆದ್ದಿದೆ. 30 ವಾರ್ಡ್ ಗಳಿಗೆ ನಡೆದಿರುವ ಚುನಾವಣೆಯಲ್ಲಿ ಎಲ್ ಡಿಎಫ್ 7, ಯುಡಿಎಫ್ 5 ಸ್ಥಾನಗಳಿಗೆ ಸೀಮಿತವಾಗಿದೆ. ಇನ್ನೂ ಮೂರು ವಾರ್ಡ್ ಗಳಲ್ಲಿ ಫಲಿತಾಂಶ ಬಾಕಿಯಿದ್ದು, ಅದರಲ್ಲಿ 2ರಲ್ಲಿ ಬಿಜೆಪಿ ಮುನ್ನಡೆ ಸಾಧಿಸುತ್ತಿದೆ. ಇಲ್ಲಿ ಎಲ್ ಡಿಎಫ್ ಪ್ರಸ್ತುತ ಅಧಿಕಾರದಲ್ಲಿತ್ತು.  

ಪಂದನಂತಿಟ್ಟ ಜಿಲ್ಲಾ ವ್ಯಾಪ್ತಿಯ ಪಂದಳಂ ಮುನ್ಸಿಪಾಲಿಟಿ ಐತಿಹಾಸಿಕ ನಗರವಾಗಿದ್ದು, ಶಬರಿಮಲೆ ದೇಗುಲ ನಿರ್ವಹಣೆ ಹೊತ್ತುಕೊಂಡಿರುವ ರಾಜಮನೆತನ ಈ ಪ್ರದೇಶದಲ್ಲಿದೆ. ಈ ಹಿಂದೆ ಶಬರಿಮಲೆ ದೇಗುಲಕ್ಕೆ ಮಹಿಳೆಯರ ಪ್ರವೇಶದ ಬಗ್ಗೆ ವಿವಾದ ತಾರಕಕ್ಕೇರಿದ್ದಾಗ, ಪಂದಳಂ ರಾಜಮನೆತನ ಖಡಕ್ ಎಚ್ಚರಿಕೆ ನೀಡಿತ್ತು. ಇಲ್ಲಿ ಎಡ ಪಕ್ಷಗಳು ಮತ್ತು ಇತರ ಪಕ್ಷಗಳನ್ನು ಹಿಂದೂ ವಿರೋಧಿ ಎನ್ನುವಂತೆ ಬಿಂಬಿಸಲಾಗಿತ್ತು.   



Join Whatsapp