ಕೇರಳ: ಮುಸ್ಲಿಂ ಜಮಾಅತ್ ಕಣ್ಣೂರು ಜಿಲ್ಲಾ ಉಪಾಧ್ಯಕ್ಷ ಅಬ್ದುಲ್ಲತೀಫ್ ಸಅದಿ ಪಝಶ್ಶಿ ನಿಧನ

Prasthutha|

ಕಣ್ಣೂರು: ಕೇರಳ ಮುಸ್ಲಿಂ ಜಮಾಅತ್ ಜಿಲ್ಲಾ ಉಪಾಧ್ಯಕ್ಷ ಮತ್ತು ಸುನ್ನಿ ಮುಖಂಡ ಎನ್. ಅಬ್ದುಲ್ಲತೀಫ್ ಸಅದಿ ಪಝಶ್ಶಿ ನಿಧನರಾಗಿದ್ದಾರೆ.

- Advertisement -


ಕಣ್ಣೂರಿನಲ್ಲಿ ಕೆ.ಎಂ.ಬಶೀರ್ ಪರ ನ್ಯಾಯಕ್ಕಾಗಿ ಕೇರಳ ಮುಸ್ಲಿಂ ಜಮಾಅತ್ ಆಯೋಜಿಸಿದ್ದ ಕಲೆಕ್ಟರೇಟ್ ಮೆರವಣಿಗೆಯಲ್ಲಿ ಪಾಲ್ಗೊಂಡು ಮಾತಾಡಿ ಹಿಂದಿರುಗಿದ ಅವರಿಗೆ ಎದೆ ನೋವು ಅನುಭವವಾಗಿತ್ತು.


ತಕ್ಷಣ ಅವರನ್ನು ಕಣ್ಣೂರಿನ ಎಕೆಜಿ ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ಮಧ್ಯಾಹ್ನ 3.30 ರ ವೇಳೆಗೆ ಅವರು ಇಹಲೋಕ ತ್ಯಜಿಸಿದರು ಎಂದು ತಿಳಿದು ಬಂದಿದೆ.



Join Whatsapp