ವಿಶ್ವವಿದ್ಯಾಲಯದ ಕುಲಪತಿ ನೇಮಕಾತಿಯನ್ನು ರದ್ದುಗೊಳಿಸಿದ ಕೇರಳ ಹೈಕೋರ್ಟ್

Prasthutha|

ತಿರುವನಂತಪುರ: ರಾಜ್ಯ ವಿಶ್ವವಿದ್ಯಾಲಯದ ಕುಲಪತಿಗಳ ನೇಮಕವನ್ನು ಕೇರಳ ಹೈಕೋರ್ಟ್ ಸೋಮವಾರ ರದ್ದು ಪಡಿಸಿದೆ.

- Advertisement -

ರಾಜ್ಯಪಾಲ ಹಾಗೂ ರಾಜ್ಯ ಸರ್ಕಾರದ ತಿಕ್ಕಾಟದ ನಡುವೆಯೇ ಈ ಆದೇಶದಿಂದ  ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರಿಗೆ ಭಾರಿ ಹಿನ್ನಡೆಯಾಗಿದೆ ಎನ್ನಲಾಗಿದೆ.

ಕೇರಳ ಮೀನುಗಾರಿಕೆ ಮತ್ತು ಸಾಗರ ಅಧ್ಯಯನ ವಿಶ್ವವಿದ್ಯಾಲಯದ (ಕೆಯುಎಫ್ಒಎಸ್) ಕುಲಪತಿ ಡಾ.ರಿಜಿ ಜಾನ್ ಅವರ ನೇಮಕವನ್ನು ಕೇರಳ ಹೈಕೋರ್ಟ್ ರದ್ದುಗೊಳಿಸಿದ್ದು, ಹೊಸ ಶೋಧನಾ ಸಮಿತಿಯನ್ನು ರಚಿಸುವಂತೆ ಹೈಕೋರ್ಟ್ ಕುಲಾಧಿಪತಿಗೆ ಸೂಚನೆ ನೀಡಿದೆ. ಕುಲಪತಿಗಳ ನೇಮಕವು ಯುಜಿಸಿ ನಿಯಮಗಳು ಮತ್ತು ನಿಬಂಧನೆಗಳನ್ನು ಅನುಸರಿಸಬೇಕು ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.

- Advertisement -

ಇದರೊಂದಿಗೆ, ನೇಮಕಾತಿಯ ದಿನಾಂಕದಿಂದ ಅವಧಿಯು ಅನೂರ್ಜಿತವಾಗಿರುತ್ತದೆ. ಆದೇಶಕ್ಕೆ ತಡೆ ನೀಡುವಂತೆ ಸರ್ಕಾರದ ಮನವಿಯನ್ನು ಹೈಕೋರ್ಟ್ ಸ್ವೀಕರಿಸಲಿಲ್ಲ.

ಡಾ.ಕೆ.ಕೆ.ವಿಜಯನ್ ಮತ್ತು ಡಾ.ಸದಾಶಿವನ್ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎಸ್.ಮಣಿಕುಮಾರ್ ಮತ್ತು ನ್ಯಾಯಮೂರ್ತಿ ಶಾಜಿ ಪಿ.ಚಾಲಿ ಅವರನ್ನು ಒಳಗೊಂಡ ವಿಭಾಗೀಯ ಪೀಠ ಈ ಆದೇಶ ನೀಡಿದೆ.

Join Whatsapp