ಕಾಲುವೆಯಲ್ಲಿ ಮುಳುಗಿ ಸೈಕ್ಲಿಂಗ್ ಕ್ರೀಡಾಪಟು ಸಾವು

Prasthutha|

ಮಂಡ್ಯ: ರಾಷ್ಟ್ರ ಮಟ್ಟದ ಸೈಕಲ್ ಪೋಲೋ ಆಟಗಾರನೊಬ್ಬ ಕಾಲುವೆಯಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ಕೆ.ಆರ್.ಪೇಟೆ ತಾಲೂಕಿನ ಅಕ್ಕಿಹೆಬ್ಬಾಳು ಗ್ರಾಮದಲ್ಲಿ ನಡೆದಿದೆ.

- Advertisement -


ಮೃತ ಬಾಲಕನನ್ನು ಪಾಂಡಿಚೇರಿ ಮೂಲದ ಅಲ್ಹರ್ಷ್ (17) ಎಂದು ಗುರುತಿಸಲಾಗಿದೆ. ಅಲ್ಹರ್ಷ್ ಹತ್ತಿರದ ಕಾಲುವೆಗೆ ಈಜಲು ಹೋಗಿದ್ದು, ದುರಾದೃಷ್ಟವಶಾತ್ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.


ನವೆಂಬರ್ 17 ರಿಂದ 20 ವರೆಗೆ ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ಮೈಸೂರು ವಿಶ್ವವಿದ್ಯಾಲಯ ಹಾಸ್ಟೆಲ್ ಮೈದಾನದಲ್ಲಿ ರಾಷ್ಟ್ರ ಮಟ್ಟದ ಸೈಕಲ್ ಪೋಲೋ ಚಾಂಪಿಯನ್‌ಶಿಪ್‌ ಆಯೋಜಿಸಿತ್ತು. ಅಲ್ಹರ್ಷ್ ಈ ಕ್ರೀಡಾಕೂಟದಲ್ಲಿ ಭಾಗವಹಿಸಲು ಪಾಂಡಿಚೇರಿ ತಂಡದಿಂದ ಬಂದ ಕ್ರೀಡಾಪಟುವಾಗಿದ್ದಾನೆ .

- Advertisement -


ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ , ಶೋಧ ಕಾರ್ಯ ನಡೆಸಿ ಮೃತದೇಹವನ್ನು ಹೊರತೆಗೆದಿದ್ದಾರೆ. ಈ ಬಗ್ಗೆ ಕೆ.ಆರ್.ಪೇಟೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Join Whatsapp