ರೋಹಿಂಗ್ಯಾ ಗಳಿಗೆ ಐಸಿಸ್ ಜೊತೆ ಸಂಪರ್ಕವಿಲ್ಲ: ಸುಪ್ರೀಂಕೋರ್ಟ್ ಗೆ ಕೇರಳ ಸರ್ಕಾರ ಮಾಹಿತಿ

Prasthutha|

ನವದೆಹಲಿ: ರಾಜ್ಯದಲ್ಲಿರುವ ರೋಹಿಂಗ್ಯಾಗಳಿಗೆ ಐಸಿಸ್ ಜೊತೆ ಸಂಪರ್ಕವಿಲ್ಲ, ನವಜಾತ ಶಿಶುಗಳು ಸೇರಿದಂತೆ ಒಟ್ಟು 12 ರೋಹಿಂಗ್ಯಾಗಳು, 214 ಪಾಕಿಸ್ತಾನಿ ಪ್ರಜೆಗಳು ರಾಜ್ಯದಲ್ಲಿದ್ದಾರೆ, ಗಡಿಯಾಚೆಗಿನ ಭಯೋತ್ಪಾದನೆ ಗಮನಕ್ಕೆ ಬಂದಿಲ್ಲ ಎಂದು ಸುಪ್ರೀಂಕೋರ್ಟ್ಗೆ ಕೇರಳ ಸರ್ಕಾರ ಮಾಹಿತಿ ನೀಡಿದೆ.
“ರಾಜ್ಯದಲ್ಲಿರುವ ರೋಹಿಂಗ್ಯಾಗಳಿಗೆ ಐಸಿಸ್ ಸಂಪರ್ಕವಿಲ್ಲ. ಎರಡು ನವಜಾತ ಶಿಶುಗಳು ಸೇರಿದಂತೆ ರಾಜ್ಯದಲ್ಲಿ ಒಟ್ಟು 12 ರೋಹಿಂಗ್ಯಾ ನಿರಾಶ್ರಿತರಿದ್ದಾರೆ” ಎಂದು ರಾಜ್ಯ ಸರ್ಕಾರ ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ ಪ್ರತಿಕ್ರಿಯೆಯಾಗಿ ಸಲ್ಲಿಸಿದ ದಾಖಲೆಯಲ್ಲಿ ತಿಳಿಸಿದೆ.

- Advertisement -


ರೋಹಿಂಗ್ಯಾ ಮುಸ್ಲಿಮರನ್ನು ಭಾರತದಿಂದ ಬಂಧನದಲ್ಲಿಡಲು ಮತ್ತು ಗಡೀಪಾರು ಮಾಡಲು ನ್ಯಾಯಾಲಯದ ನಿರ್ದೇಶನವನ್ನು ಕೋರಿ ಸಲ್ಲಿಸಲಾಗಿದ್ದ ಪಿಐಎಲ್ ಗೆ ಪ್ರತಿಕ್ರಿಯೆ ಸಲ್ಲಿಸುವಾಗ ಸರ್ಕಾರ ಈ ಮಾಹಿತಿ ನೀಡಿದೆ. 214 ಪಾಕಿಸ್ತಾನಿ ಪ್ರಜೆಗಳು ಕೂಡ ಕೇರಳದಲ್ಲಿದ್ದಾರೆ.


ಬಿಜೆಪಿ ನಾಯಕ ಮತ್ತು ವಕೀಲ ಅಶ್ವಿನಿ ಕುಮಾರ್ ಉಪಾಧ್ಯಾಯ ಅವರು ಪಿಐಎಲ್ ಸಲ್ಲಿಸಿದ್ದು, ನುಸುಳುಕೋರರ ಪ್ರವೇಶದಿಂದ ದೇಶದ ಏಕತೆ, ಸಮಗ್ರತೆ ಮತ್ತು ಭದ್ರತೆಗೆ ಗಂಭೀರ ಬೆದರಿಕೆಯಾಗಿದೆ ಎಂದು ವಾದಿಸಿದ್ದಾರೆ.

Join Whatsapp